ಕೊಳ್ನಾಡು ಗ್ರಾಪಂ ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್
ಕೊಳ್ನಾಡು ಗ್ರಾಮದ ಟಾಸ್ಕ್ ಫೋರ್ಸ್ ಸಮಿತಿ ಸಭೆ ಶುಕ್ರವಾರ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ನಡೆದಿದ್ದು, ಗ್ರಾಮವನ್ನು ಕೊರೊನಾಮುಕ್ತವಾಗಿಸಲು ಸಂಕಲ್ಪತೊಡಬೇಕು ಎಂದರು.
ಪ್ರಸ್ತುತ ಕೊಳ್ನಾಡು ಗ್ರಾಮದಲ್ಲಿ 6 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಎಲ್ಲರೂ ಗುಣಮುಖರಾಗುತ್ತಿದ್ದಾರೆ ಎಂಬುದು ಸಂತೋಷದ ವಿಚಾರ ಎಂದು ಅವರು ಶ್ಲಾಘಿಸಿದರು. ಯಾವುದೇ ಮುಲಾಜಿಲ್ಲದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಿ, ಅದರ ಸಂಪೂರ್ಣ ಜವಾಬ್ದಾರಿ ಟಾಸ್ಕ್ ಫೋರ್ಸ್ ಗಿದೆ ಎಂದು ಶಾಸಕರು ಈ ಸಂದರ್ಭ ಸೂಚಿಸಿದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ. ಎಸ್.ಆರ್ ಕೋವಿಡ್ ಲಸಿಕೆ ಪಡೆಯುವ ಮಾಹಿತಿ ನೀಡಿದರು. ಕೋವಿಡ್ ಲಸಿಕೆ ಬಗ್ಗೆ ಅನಾವಶ್ಯಕ ಗೊಂದಲ ಮಾಡಿಕೊಳ್ಳಬಾರದು. ಎಲ್ಲರಿಗೂ ಲಸಿಕೆ ನೀಡುವ ಕೆಲಸ ಇಲಾಖೆಯಿಂದ ಆಗುತ್ತದೆ ಎಂದು ಅವರು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷೆ ನೆಬಿಸಾ, ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಆಯಿಶಾಬಾನು, ತಾ.ಪಂ.ಇ.ಒ.ರಾಜಣ್ಣ, ಕಂದಾಯ ನಿರೀಕ್ಷಕ ದಿವಾಕರ, ಗ್ರಾಮ ಕರಣಿಕ ಅನಿಲ್, ಶಾಸಕರ ವಾರ್ ರೂಮ್ ಸದಸ್ಯರಾದ ದೇವದಾಸ ಶೆಟ್ಟಿ, ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Be the first to comment on "ಕೊಳ್ನಾಡು ಗ್ರಾಮ ಕೊರೊನಾ ಮುಕ್ತವಾಗಲು ಸಂಕಲ್ಪ ತೊಡಿ"