



ಬಂಟ್ವಾಳ: ತೌಖ್ತೆ ಚಂಡಮಾರುತದ ಪರಿಣಾಮ ಮಳೆ ಮುಂದುವರಿದ ಪರಿಣಾಮ, ಬಂಟ್ವಾಳ ತಾಲೂಕಿನ ಸಾಲೆತ್ತೂರಿನ ಬಳಿ ರಸ್ತೆಯೊಂದರ ತುಂಬೆಲ್ಲಾ ಕೆಸರು ತುಂಬಿಕೊಂಡಿತು. ಸುರತ್ಕಲ್ ಕಬಕ ರಾಜ್ಯ ಹೆದ್ದಾರಿ 101 ಇದಾಗಿದ್ದು, ಸಾಲೆತ್ತೂರಿನಿಂದ ವಿಟ್ಲದವರೆಗಿನ ಭಾಗದಲ್ಲಿ ಮಣ್ಣು ರಸ್ತೆಯ ತುಂಬೆಲ್ಲಾ ಹರಡಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಾಚರಿಸಿದ ಬಂಟ್ವಾಳದ ಲೋಕೋಪಯೋಗಿ ಇಲಾಖೆ, ಮಣ್ಣು ತೆರವುಗೊಳಿಸುವ ಕೆಲಸವನ್ನು ವ್ಯವಸ್ಥೆಗೊಳಿಸಿದರು/.
Be the first to comment on "ಮಳೆಗೆ ರಸ್ತೆಯಿಡೀ ಮಣ್ಣು, ತೆರವುಗೊಳಿಸಿದ ಬಂಟ್ವಾಳದ ಪಿಡಬ್ಲ್ಯುಡಿ"