ಬಂಟ್ವಾಳ: ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅವರಿಂದ ಬಂಟ್ವಾಳದಿಂದ ಮಂಗಳೂರುವರೆಗಿನ ದಾರಿಯಲ್ಲಿ ಪೊಲೀಸ್ ಹಾಗೂ ಅಗತ್ಯವುಳ್ಳವರಿಗೆ ಊಟ ನೀಡುವ ವ್ಯವಸ್ಥೆಯನ್ನು ಶುಕ್ರವಾರ ಕೈಗೊಳ್ಳಲಾಯಿತು.
ಸುಮಾರು 150ಕ್ಕೂ ಅಧಿಕ ಮಂದಿಗೆ ಶರೀಫ್ ಅವರ ಮುಂದಾಳತ್ವದಲ್ಲಿ ಆಹಾರ ವಿತರಿಸಲಾಯಿತು. ಬಸ್ ನಿಲ್ದಾಣ ಮೊದಲಾದೆಡೆ ಬೀಡು ಬಿಟ್ಟಿದ್ದ ನಿರ್ಗತಿಕರಿಗೂ ಆಹಾರ ನೀಡಿದ ಶರೀಫ್ ನೇತೃತ್ವದ ತಂಡ, ಬಂಟ್ವಾಳದಿಂದ ಮಂಗಳೂರುವರೆಗಿನ ಪೊಲೀಸ್ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೂ ಊಟ ವಿತರಿಸಿದರು. ಬಂಟ್ವಾಳ ಎನ್.ಎಸ್.ಯು.ಐ. ಕಾರ್ಯದರ್ಶಿ ಮಹಮ್ಮದ್ ಶಫೀಕ್, ಶಹಜ್, ಸಾದಿಕ್, ಶರೀಫ್ ಬಿಸಿರೋಡ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
Be the first to comment on "ಕೋವಿಡ್ ಕರ್ಫ್ಯೂ ಹಿನ್ನೆಲೆ: ಬಂಟ್ವಾಳದಿಂದ ಮಂಗಳೂರುವರೆಗೆ ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅವರಿಂದ ಊಟೋಪಚಾರ"