ಚಂಡಮಾರುತ ಹಿನ್ನೆಲೆ ವಾಯುಭಾರ ಕುಸಿತ
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಗೂ ತೌಕ್ತೆ ಚಂಡಮಾರುತದ ಎಫೆಕ್ಟ್ ಶುಕ್ರವಾರ ಮಧ್ಯಾಹ್ನದ ವೇಳೆಗೇ ಕಾಣಿಸಿಕೊಳ್ಳಲಾರಂಭಿಸಿವೆ. ಮರವಂತೆ, ಉಳ್ಳಾಲ ಸಮೀಪ ಸೋಮೇಶ್ವರ ಪರಿಸರದಲ್ಲಿ ಕಡಲಬ್ಬರ ಕಾಣಿಸಿಕೊಂಡಿತು. ಬಂಟ್ವಾಳ ಸಹಿತ ಹಲವೆಡೆ ಬಿಸಿಲು ಮಾಯವಾಗಿ ತಂಗಾಳಿ ಬೀಸತೊಡಗಿದರೆ, ಉಚ್ಚಿಲ ಸೋಮೇಶ್ವರದಲ್ಲಿ ಸಮುದ್ರ ಅಲೆಗಳು ಹೆಚ್ಚಾದವು. ಸೋಮೇಶ್ವರ, ಉಚ್ಚಿಲ, ಪೆರಿಬೈಲ್ ಬೆಟ್ಟಂಪಾಡಿ ಮುಂತಾದಡೆಗಳಲ್ಲಿ ಗಾಳಿ ವೇಗವಾಗಿದೆ.
Be the first to comment on "ಮಧ್ಯಾಹ್ನದ ಬಳಿಕ ಬೀಸುಗಾಳಿ, ಕಡಲಬ್ಬರ"