ಮಂಗಳೂರು: ಜಿಲ್ಲೆಯಲ್ಲಿ ಮೇ 14 ರಂದು ಲಸಿಕೆ ಲಭ್ಯತೆ ಇಲ್ಲದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರ/ನಗರ ಪ್ರಾಥಮಿಕ ಆರೋಗ್ಯ ಕೇಂದ್ರ/ಸಮುದಾಯ ಆರೋಗ್ಯ ಕೇಂದ್ರ/ತಾಲೂಕು ಆಸ್ಪತ್ರೆಗಳಲ್ಲಿ ಲಸಿಕಾ ಶಿಬಿರವು ಇರುವುದಿಲ್ಲ. ಸರ್ಕಾರದ ಆದೇಶದಂತೆ 18 ವರ್ಷದಿಂದ 44 ವರ್ಷದ ಫಲಾನುಭವಿಗಳಿಗೆ ನಡೆಯುವ ಲಸಿಕಾ ಶಿಬಿರವನ್ನು ಮುಂದೂಡಲಾಗಿದೆ.
ಮೇ 14 ರಿಂದ ಮೇ 17 ರವರೆಗೆ ಜಿಲ್ಲಾ ವೆನ್ಲಾಕ್, ಆಯುಷ್ ಬ್ಲಾಕ್ ಹಾಗೂ ತಾಲೂಕು ಆಸ್ಪತ್ರೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಇಲ್ಲಿ ನಡೆಯಬೇಕಾಗಿದ್ದ 18 ವರ್ಷದಿಂದ 44 ವರ್ಷದ ಫಲಾನುಭವಿಗಳ ಲಸಿಕಾ ಶಿಬಿರವನ್ನು ರದ್ದುಪಡಿಸಲಾಗಿದೆ. ಲಸಿಕೆಯು ರಾಜ್ಯದಿಂದ ಬಂದ ನಂತರ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲಾಣ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "18 ವರ್ಷದಿಂದ 44 ವರ್ಷದ ಫಲಾನುಭವಿಗಳ ಕೊರೊನಾ ಲಸಿಕಾ ಶಿಬಿರ ಮುಂದಕ್ಕೆ"