ಬಂಟ್ವಾಳ: ವಲಸೆ ಕಾರ್ಮಿಕರನ್ನು ಉಳಿಸಲು ಪ್ರತಿಯೊಂದು ಪಂಚಾಯಿತಿಯಲ್ಲಿ ಪಾಲನಾ ಕೇಂದ್ರವನ್ನು ಮಾಡಬೇಕು, ಬಡವರಿಗೆ ದಿನಬಳಕೆಯ ಪ್ಯಾಕೇಜ್ ಕೊಟ್ಟು ಬಡವರನ್ನು ರಕ್ಷಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯಿಸಿದ್ದಾರೆ.
ಸರ್ಕಾರ ಘೋಷಿಸಿರುವ ಕಠಿಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರು ಸಂಕಷ್ಟಕ್ಕೊಳಗಾಗಿದ್ದು, ದಿನನಿತ್ಯದ ದುಡಿಮೆ ಇಲ್ಲದ ಕಾರಣ ತೊಂದರೆಗೊಳಗಾಗಿದ್ದಾರೆ ಎಂದು ಬಂಟ್ವಾಳದಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಕೊರೊನಾ ವೈರಸ್ ನಿಯಂತ್ರಣ ಉದ್ದೇಶದಿಂದ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಇದು ಕಠಿಣವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಮಲೆನಾಡು ಪ್ರದೇಶಗಳಲ್ಲಿ ಮನೆಗಳು ದೂರವಿದ್ದು, ಜನರಿಗೆ ಓಡಾಟ ಮಾಡಲು ಅವಕಾಶ ಮಾಡಲಾಗಿದೆ. ರೇಷನ್ ಪಡೆದುಕೊಳ್ಳಲು ಬಡವರಿಗೆ ಕಷ್ಟವಾಗುತ್ತಿದೆ. ದಿನಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು, ಆಟೊ ಚಾಲಕರಿಗೆ ದಿನಬಳಕೆ ವಸ್ತುಗಳನ್ನು ಪಡೆಯಲು ಕಷ್ಟವಾಗುತ್ತಿದೆ. ಆದ್ದರಿಂದ ಪ್ಯಾಕೇಜ್ ಘೋಷಣೆ ಒದಗಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ. ಲಾಕ್ ಡೌನ್ ಘೋಷಣೆ ಮಾಡಿ ಕಠಿಣವಾಗಿದೆ, ಪಾಲನೆ ಮಾಡಿ ಎಂದು ಹೇಳುವುದು ಸುಲಭ, ಬಡವರಿಗೆ ಅನುಕೂಲವಾಗುವಂತೆ ದಿನಬಳಕೆಗೆ ಬೇಕಾಗುವಂಥ ಕಿಟ್ ಒದಗಿಸಿ ಎಂದು ಹೇಳಿದ್ದಾರೆ.
Be the first to comment on "ವಲಸೆ ಕಾರ್ಮಿಕರನ್ನು ಉಳಿಸಲು ಪಾಲನಾ ಕೇಂದ್ರ ಮಾಡಿರಿ: ಬಂಟ್ವಾಳದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯ"