ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ದ.ಕ.ಜಿಲ್ಲೆ ವತಿಯಿಂದ ಕೊರೊನಾ ಪೀಡಿತರಿಗೆ ಹಾಗೂ ಗುಣಮುಖರಾದವರ ತುರ್ತು ಪ್ರಯಾಣಕ್ಕೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ದ.ಕ.ಜಿಲ್ಲೆಗೆ ಯೋಜನೆಯಿಂದ ಒದಗಿಸಲಾದ ವಾಹನ ಚಾಲಕರಿಗೆ ಪಿಪಿ ಕಿಟ್ ಅನ್ನು ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಅವರು ಬಂಟ್ವಾಳದಲ್ಲಿ ವಿತರಿಸಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಆದೇಶದಂತೆ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್.ಮಂಜುನಾಥ್ ಅವರ ಮಾರ್ಗದರ್ಶನದಂತೆ ಕೊರೊನಾ ಪೀಡಿತರಿಗೆ ತುರ್ತು ಪ್ರಯಾಣಕ್ಕೆ ದ.ಕ.ಜಿಲ್ಲೆಯಲ್ಲಿ ಒಟ್ಟು 9 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಯೋಜನೆಯಿಂದ ಒಟ್ಟು 350 ವಾಹನಗಳನ್ನು ತುರ್ತು ಪ್ರಯಾಣಕ್ಕೆ ಒದಗಿಸಲಾಗಿದೆ. ಪಿಪಿ ಕಿಟ್ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ವೆನ್ಲಾಕ್ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಒದಗಿಸಿದ್ದು, ಜಿಲ್ಲಾಧಿಕಾರಿ, ಜಿಲ್ಲೆಯ ಎಲ್ಲ ಅಧಿಕಾರಿ ವರ್ಗ, ಸಂಸದರು, ಶಾಸಕರು ಸಹಕರಿಸಿದ್ದಾರೆ, ವಾಹನ ಬೇಕಾದವರು ಸ್ಥಳೀಯ ಯೋಜನಾಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಸತೀಶ್ ಶೆಟ್ಟಿ ಈ ಸಂದರ್ಭ ತಿಳಿಸಿದರು. ಯೋಜನಾಧಿಕಾರಿ ಜಯಾನಂದ ಪಿ, ರವಿ, ನಾಗೇಶ್, ಮಹಂತೇಶ್, ಸುರಕ್ಷಾ ಸಹಾಯಕರಾದ ವಸಂತ ಪೆರಾಜೆ ಉಪಸ್ಥಿತರಿದ್ದರು. ವಾಹನದ ಅವಶ್ಯಕತೆ ಇದ್ದವರು ಬಂಟ್ವಾಳ ಯೋಜನಾಧಿಕಾರಿ 9108398981, ವಾಹನ ಚಾಲಕರು 9741888634, ಮಂಗಳೂರು ಯೋಜನಾಧಿಕಾರಿ 7760786800, ವಾಹನ ಚಾಲಕರು 9739303506, ಬಜಪೆ ಯೋಜನಾಧಿಕಾರಿ 8310424847, ವಾಹನ ಚಾಲಕರು 9740449207, ಗುರುವಾಯನಕೆರೆ ಯೋಜನಾಧಿಕಾರಿ 8970434320, ಚಾಲಕರು 9845530939, ಬೆಳ್ತಂಗಡಿ ಯೋಜನಾಧಿಕಾರಿ 9731423341, ಚಾಲಕರು 968384679 ಸಂಪರ್ಕಿಸಬಹುದು ಎಂದು ಕಚೇರಿ ಮಾಹಿತಿ ತಿಳಿಸಿದೆ.
Be the first to comment on "ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೊರೊನಾ ಸೋಂಕಿತ, ಗುಣಮುಖರಾದವರಿಗೆ ಉಚಿತ ವಾಹನ ವ್ಯವಸ್ಥೆ"