



ಬಂಟ್ವಾಳ: ಕೊರೊನಾ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೀಗ ಟ್ರಾಫಿಕ್ ಜಾಮ್ ಆಗುವುದಿಲ್ಲ. ಆದರೆ ಹೊರಬರುವ ವಾಹನಗಳ ವೇಗವಂತೂ ಮಿತಿಮೀರುತ್ತಿದೆ. ಬಿ.ಸಿ.ರೋಡ್ ನಿಂದ ಬೆಂಗಳೂರು ಮಾರ್ಗಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳೇ ಪರಸ್ಪರ ಪೈಪೋಟಿಗಿಳಿದು ಧಾವಿಸುತ್ತಿವೆ. ಅಲ್ಲಲ್ಲಿ ರಸ್ತೆ ತಡೆಗಳನ್ನು ಮಾಡಿದರೂ ಅವುಗಳನ್ನು ಲೆಕ್ಕಿಸದೆ ಓಡಾಡುವ ವಾಹನಗಳು ಅಲ್ಲಲ್ಲಿ ಸಣ್ಣಪುಟ್ಟ ಅಪಘಾತಗಳಿಗೆ ಕಾರಣವಾಗುತ್ತಿವೆ. ಕಲ್ಲಡ್ಕ, ಮಾಣಿ ಜಂಕ್ಷನ್ ಗಳು ಮೊದಲೇ ಅಪಾಯಕಾರಿಯಾಗಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ವಾಹನಗಳು ಬರುವುದಿಲ್ಲ ಎಂಬ ನಂಬಿಕೆಯಲ್ಲಿ ಏನಾದರೂ ಅತಿಯಾದ ಆತ್ಮವಿಶ್ವಾಸದಲ್ಲಿ ಚಲಿಸಿದರೆ ಅಪಾಯ ಖಂಡಿತಾ ಇದ್ದೇ ಇದೆ.
Be the first to comment on "ಜನತಾ ಕರ್ಫ್ಯೂ: ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗದ ಸಂಚಾರ"