ಮೂರು ವರ್ಷಗಳಿಂದ ಕೇಳುವವರೇ ಇಲ್ಲ – ಇದು ಬಿ.ಸಿ.ರೋಡಿನ ಮತ್ತೊಂದು ನಿರುಪಯುಕ್ತ ಜಾಗ

ಖಾಲಿ ಜಾಗ ಸದ್ಬಳಕೆ ಮಾಡಿ – ಇದು ಜನಧ್ವನಿ, ನಿಮಗೇನನಿಸುತ್ತದೆ?

ಬಿ.ಸಿ.ರೋಡಿನ ನಿರುಪಯುಕ್ತ ಅಥವಾ ಬಳಕೆಯಾಗದ.. ನೀವು ಹೇಗೆ ಹೇಳುತ್ತೀರೋ ಗೊತ್ತಿಲ್ಲ. ರಿಯಲ್ ಎಸ್ಟೇಟ್ ತಾರಕಾವಸ್ಥೆಯಲ್ಲಿದ್ದ ಸಂದರ್ಭ ಇಲ್ಲಿ ಜನಜಂಗುಳಿ. ಈಗ ಕಸ ಕಡ್ಡಿಗಳು, ಉಪಯೋಗಿಸಿದ ತ್ಯಾಜ್ಯದ ಹಾವಳಿ. ಈ ಜಾಗದಲ್ಲಿ ಮಹತ್ತರ ಬದಲಾವಣೆ ಆಗುತ್ತದೆ ಎಂಬ ಶಂಕೆಯನ್ನು ಆಗಾಗ್ಗೆ  ಜನರು ವ್ಯಕ್ತಪಡಿಸುತ್ತಾರೆ. ಆದರೆ ಸದ್ಯಕ್ಕೆ ಇದು ಮೂತ್ರಶಂಕೆಗೆ ಬಳಕೆಯಾಗುತ್ತಿದೆ.

ಇದು ಸುಮಾರು 94 ವರ್ಷ ಬಂಟ್ವಾಳ ತಾಲೂಕಿನ ನೋಂದಣಿ ಕೆಲಸಗಳಿಗೆ ಬಳಕೆಯಾಗುತ್ತಿದ್ದ ಜಾಗ. ಉಪನೋಂದಣಿ ಕಚೇರಿ. ಈಗ ಈ ಕಟ್ಟಡಕ್ಕೆ ಸುಮಾರು 97ರ ಹರೆಯ. ಇನ್ನು ಮೂರು ವರ್ಷಗಳಾದರೆ, ಶತಮಾನೋತ್ಸವ. ಮೂರು ವರ್ಷಗಳ ಹಿಂದೆಯೇ ಈ ಕಟ್ಟಡ ಧರಾಶಾಹಿಯಾಗುತ್ತದೆ ಎಂಬ ಸುದ್ದಿ ಇತ್ತು. ಆದರೆ ಇಲ್ಲಿ ಯಾವುದೇ ಚಟುವಟಿಕೆಯೂ ನಡೆಯುತ್ತಿಲ್ಲ, ಇದರ ನಿರ್ವಹಣೆಯೂ ಆಗುತ್ತಿಲ್ಲ, ಬದಲಾಗಿ ಅನಪೇಕ್ಷಿತ ಚಟುವಟಿಕೆ, ಅನಧಿಕೃತ ಶೌಚ, ಕಸ ಎಸೆಯುವುದೇ ಮೊದಲಾದ ಕೃತ್ಯಗಳಿಗೆ ಈ ಜಾಗ  ಹತ್ತಿರದಲ್ಲೇ ಬಂಟ್ವಾಳ ನಗರ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯ ಇದೆ. ಮಿನಿ ವಿಧಾನಸೌಧದ ಬಗಲಲ್ಲೇ ಈ ಬಿಲ್ಡಿಂಗ್ ಇರುವುದೇ ದೊಡ್ಡ ಬಿಲ್ಡಪ್ಪು!!.. ಹಾಗೆ ನೋಡಿದರೆ, ಬಿ.ಸಿ.ರೋಡಿನಲ್ಲಿ ಸದ್ಬಳಕೆಯಾಗದ ಖಾಲಿ ಜಾಗಗಳು ಅದೆಷ್ಟೋ ಇವೆ. ಈ ಕಟ್ಟಡದ ಸುತ್ತಮುತ್ತಲೇ ಸುಮಾರು ಮುಕ್ಕಾಲು ಎಕ್ರೆ ಜಾಗದಲ್ಲಿ ನೀಟ್ ಆಗಿ ಪಾರ್ಕಿಂಗ್ ವ್ಯವಸ್ಥೆಯನ್ನೋ, ಮತ್ತೊಂದನ್ನೋ ಮಾಡಬಹುದು. ಕಣ್ತೆರೆದು ನೋಡಬೇಕಾದವರು ಸರಿಯಾಗಿ ಪರಾಂಬರಿಸಿದರೆ ಸಾಕು..ಈಗ ಮತ್ತೆ ಕೋವಿಡ್.. ಇನ್ನು ಯಾವಾಗಲೋ..

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮೂರು ವರ್ಷಗಳಿಂದ ಕೇಳುವವರೇ ಇಲ್ಲ – ಇದು ಬಿ.ಸಿ.ರೋಡಿನ ಮತ್ತೊಂದು ನಿರುಪಯುಕ್ತ ಜಾಗ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*