ಬಂಟ್ವಾಳ ತಾಲೂಕಿನ ‘ಸ್ತಬ್ದಚಿತ್ರಣ’ ಇಲ್ಲಿದೆ
ಮೇಲೆ ಕಾಣಿಸುವ ಚಿತ್ರಗಳು ಬಂಟ್ವಾಳ, ಬಿ.ಸಿ.ರೋಡ್, ಫರಂಗಿಪೇಟೆ ಸಹಿತ ಬಂಟ್ವಾಳ ತಾಲೂಕಿನ ಶನಿವಾರದ ಜನಜೀವನದ ದೃಶ್ಯಗಳು. ಕೊರೊನಾ ಮಿತಿ ಮೀರುತ್ತಿದ್ದಂತೆ ಸರ್ಕಾರ ಕಠಿಣ ನಿರ್ಬಂಧಗಳನ್ನು ಹೇರಿದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿತ್ತು.
ಬಂಟ್ವಾಳ: ಶನಿವಾರ ಮತ್ತು ಭಾನುವಾರ ಸಂಪೂರ್ಣ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಚಟುವಟಿಕೆಗಳು ಬಂದ್ ಆಗಿವೆ. ಬಿ.ಸಿ.ರೋಡ್, ಬಂಟ್ವಾಳ, ಫರಂಗಿಪೇಟೆ, ಕಲ್ಲಡ್ಕ, ಮೇಲ್ಕಾರ್, ವಿಟ್ಲ, ಸಿದ್ಧಕಟ್ಟೆ, ಪುಂಜಾಲಕಟ್ಟೆ, ಕನ್ಯಾನ, ಮಾಣಿ ಸಹಿತ ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆಗಳಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದವು. ಹಣ್ಣು, ಹಾಲು, ತರಕಾರಿ, ಮೀನು ಮಾರಾಟಗಳು ಬೆಳಗ್ಗೆ 10ರೊಳಗೆ ನಿಲುಗಡೆಯಾದವು. ಅನಿವಾರ್ಯವಾಗಿ ಆಸ್ಪತ್ರೆಗೆ ತೆರಳುವವರು ಕಂಡುಬಂದರೇ ವಿನಃ ಬಸ್ಸುಗಳ ಸಹಿತ ಎಲ್ಲ ಚಟುವಟಿಕೆಗಳೂ ನಿಂತಿದ್ದವು. ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು, ಕಂದಾಯ ಇಲಾಖೆಯ ತಂಡದೊಂದಿಗೆ ತಾಲೂಕಿನಾದ್ಯಂತ ಸಂಚರಿಸಿ ತಪಾಸಣೆ ನಡೆಸಿದರು. ಬಂಟ್ವಾಳ ಪೊಲೀಸರು, ಪುರಸಭೆ ಅಧಿಕಾರಿಗಳ ತಂಡವೂ ಶನಿವಾರ ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ಕ್ರಮ ಕೈಗೊಂಡರು.
Be the first to comment on "ಕೋವಿಡ್ ಕರ್ಫ್ಯೂ – ಬಂಟ್ವಾಳ ಪೂರ್ತಿ ಮೌನ"