ಬಂಟ್ವಾಳ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಯವರ ಷಷ್ಠಬ್ದ್ಯ ಸಮಾರಂಭ ದ ಪ್ರಯುಕ್ತ ಕಲ್ಲಡ್ಕ ವಲಯ ಸಮಿತಿಯ ನೇತೃತ್ವದಲ್ಲಿ ಕಲ್ಲಡ್ಕ ಪೇಟೆಯ ಸ್ವಚ್ಚತೆ ಕಾರ್ಯಕ್ರಮ ಭಾನುವಾರ ನಡೆಯಿತು.
ಕಲ್ಲಡ್ಕ ಆಸುಪಾಸಿನ ಎಲ್ಲಾ ಸಂಘಟನೆಗಳ ಕೂಡುವಿಕೆಯಿಂದ ನಡೆದ ಕಾರ್ಯಕ್ರಮವನ್ನು ಹೋಟೆಲ್ ಲಕ್ಷ್ಮೀ ಗಣೇಶ್ ನ ಮಾಲಕರಾದ ರಾಜೇಂದ್ರ ಹೊಳ್ಳ ಉದ್ಘಾಟಿಸಿದರು. ರಾಷ್ಟ್ರ ಸೇವಿಕ ಸಮಿತಿಯ ಡಾ. ಕಮಲ ಪ್ರಭಾಕರ ಭಟ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಪೂಜಾರಿ ಶುಭ ಹಾರೈಸಿದರು. ಷಷ್ಠಬ್ದ್ಯ ಕೇಂದ್ರ ಸಮಿತಿಯ ಗೌರವ ಅಧ್ಯಕ್ಷ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿ ಮಾರ್ಗದರ್ಶನ ಮಾಡಿದರು. ಷಷ್ಠಬ್ದ್ಯ ವಲಯ ಸಮಿತಿಯ ಅಧ್ಯಕ್ಷರಾದ ರಾಧಕೃಷ್ಣ ಆಡ್ಯಂತಾಯ, ಬಾಳ್ತೀಲ ಪಂಚಾಯತ್ ಅಧ್ಯಕ್ಷರಾದ ಹಿರಣ್ಮಯಿ, ಗೋಳ್ತಮಜಲು ಪಂಚಾಯತ್ ಅಧ್ಯಕ್ಷರಾದ ಅಭಿಷೇಕ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಮುಖರಾದ ಕ.ಕೃಷ್ಣಪ್ಪ, ಚೆನ್ನಪ್ಪ ಕೋಟ್ಯಾನ್, ವಜ್ರನಾಥ ಕಲ್ಲಡ್ಕ, ದಿನೇಶ್ ಅಮ್ಟೂರು, ಯತೀನ್ ಕುಮಾರ್, ಸುಜೀತ್ ಕುಮಾರ್, ರತ್ನಾಕರ ಶೆಟ್ಟಿ, ನಾಗೇಶ್ ಕಲ್ಲಡ್ಕ, ಆಕೃತಿ ಕೇಂದ್ರ, ಜಯಲಕ್ಷ್ಮೀ, ಲಖಿತ ಶೆಟ್ಟಿ, ರಮೇಶ್ ಹೊಸಕಟ್ಟ, ನಾಗೇಶ್ ಬೊಂಡಾಲ, ರಾಜೇಶ್ ಕೊಟ್ಟಾರಿ, ಯೋಗೀಶ್ ಗೌರೀಶ್, ಸತೀಶ್ ಆಚಾರ್ಯ, ಲತೇಶ್ ಹನುಮಾನ್ ನಗರ, ಬಾಬು ಹನುಮಾನ್ ನಗರ, ಚಿದಾನಂದ ಆಚಾರ್ಯ, ಪ್ರಕಾಶ್ ಹನುಮಾನ್ ನಗರ, ಲೀಲಾವತಿ ಕುಕ್ಕಮಜಲು ಮತ್ತು ಇತರ ಪ್ರಮುಖರು ಬಾಗವಹಿಸಿದರು. ಶ್ರೀ ರಾಮ ಮಂದಿರ ಕಲ್ಲಡ್ಕ. ರಾಷ್ಟ್ರೀಯ ಸ್ವಯಂಸೇವಕ ಸಂಘ. ರಾಷ್ಟ್ರ ಸೇವಿಕ ಸಮಿತಿ, ವಿ.ಹಿಂ.ಪ ಮತ್ತು ಬಜರಂಗದಳ ಕಲ್ಲಡ್ಕ ವಲಯ, ಹಿಂದೂ ಜಾಗರಣ ವೇದಿಕೆ ಕಲ್ಲಡ್ಕ ವಲಯ, ಗೋಳ್ತಮಜಲು ಗ್ರಾಮ ಪಂಚಾಯತ್, ಬಾಳ್ತೀಲ ಗ್ರಾಮ ಪಂಚಾಯತ್, ಒಡಿಯೂರು ಸ್ವ ಸಹಾಯ ಗುಂಪುಗಳು ಕಲ್ಲಡ್ಕ ವಲಯ., ಶ್ರೀ ಶಾರದ ಸೇವಾ ಪ್ರತಿಷ್ಠಾನ ಕಲ್ಲಡ್ಕ. ನೇತಾಜಿ ಯುವಕ ಮಂಡಲ ಕಲ್ಲಡ್ಕ, ಓಂ ಶಕ್ತಿ ಪ್ರೆಂಡ್ಸ್ ಕಲ್ಲಡ್ಕ. ಉತ್ಸಾಹಿ ತರುಣ ವೃಂದ ಬೊಂಡಾಲ, ಬಿಲ್ಲವ ಸಂಘ ಕಲ್ಲಡ್ಕ, ಝಾನ್ಸಿ ಮಹಿಳಾ ಮಂಡಲಿ ಕಲ್ಲಡ್ಕ, ಪತಂಜಲಿ ಯೋಗ ತರಗತಿಯ ಸದಸ್ಯರು ಸ್ವಯಂಸೇವಕರಾಗಿ ಬಾಗವಹಿಸಿದರು.
Be the first to comment on "ಒಡಿಯೂರು ಶ್ರೀಗಳ ಷಷ್ಟ್ಯಬ್ದ ಹಿನ್ನೆಲೆಯಲ್ಲಿ ಕಲ್ಲಡ್ಕ ಪೇಟೆ ಸ್ವಚ್ಛತಾ ಕಾರ್ಯಕ್ರಮ"