ಬಂಟ್ವಾಳ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಷಷ್ಟ್ಯಬ್ದ ಸಂಭ್ರಮ ಹಿನ್ನೆಲೆಯಲ್ಲಿ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ ಮಂಗಳವಾರ 12 ಕಾಯಿ ಗಣಹೋಮ, ಧರ್ಮಸಂವಾದ ಕಾರ್ಯಕ್ರಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಹಾಗೂ ಹನುಮಾನ್ ಚಾಳೀಸಾ ಪಠಣ ನಡೆಯಿತು.
ಗಣಹೋಮದ ಪೂರ್ಣಾಹುತಿ ವೇಳೆ ಭಾಗವಹಿಸಿ ಮಾತನಾಡಿದ ಶ್ರೀಗಳು ಯುಗಾದಿಯ ಈ ಪರ್ವಕಾಲದಲ್ಲಿ ಸಾಮಾಜಿಕ ಸೇವೆಯನ್ನು ಮಾಡುವ ಮೂಲಕ ಜನಹಿತವನ್ನು ಕಾಪಾಡುವ ಕಾರ್ಯವನ್ನು ಮಾಡಬೇಕು ಎಂದು ಹರಸಿದರು. ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ ಭಟ್ ಗಣಯಾಗ ನೆರವೇರಿಸಿದರು. ಈ ಸಂದರ್ಭ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಒಡಿಯೂರು ಶ್ರೀಗಳ ಜನ್ಮಷಷ್ಟ್ಯಬ್ದ ಆಚರಣೆಯ ಕೇಂದ್ರ ಸಮಿತಿಯ ಉಪಾಧ್ಯಕ್ಷರೂ ಪುಣೆ ಸೇವಾ ಸಮಿತಿ ಅಧ್ಯಕ್ಷರೂ ಆಗಿರುವ ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ಸಹಿತ ನಂದಾವರ ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಜಿಪಮಾಗಣೆಯ ಒಡಿಯೂರು ಶ್ರೀ ಗ್ರಾಮವಿಕಾಸ ಸಮತಿಯ ಸದಸ್ಯರು ಉಪಸ್ಥಿತರಿದ್ದರು. ಒಡಿಯೂರು ಶ್ರೀಗಳ ಷಷ್ಟ್ಯಬ್ದ ಕಾರ್ಯಕ್ರಮಗಳ ಕುರಿತು ಯಶವಂತ ವಿಟ್ಲ ಮಾಹಿತಿ ನೀಡಿದರು. ಬಳಿಕ ಸಾಮೂಹಿಕ ಹನುಮಾನ್ ಚಾಳೀಸಾ ಪಠಣ, ಧರ್ಮಸಂವಾದ ಕಾರ್ಯಕ್ರಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
Be the first to comment on "ಒಡಿಯೂರು ಶ್ರೀಗಳ ಷಷ್ಟ್ಯಬ್ದ: ನಂದಾವರದಲ್ಲಿ ಗಣಹೋಮ, ಧಾರ್ಮಿಕ ಕಾರ್ಯಕ್ರಮ"