ಬಂಟ್ವಾಳ: ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದಂತೆ ಭಾರತದಾದ್ಯಂತ ನಡೆಸಲಾಗುತ್ತಿರುವ ಹೆದ್ದಾರಿ ತಡೆ, ಪ್ರತಿಭಟನೆ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ದ.ಕ.ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘ ಶುಕ್ರವಾರ ಆಯೋಜಿಸಿತು.
ಬಿ.ಸಿ.ರೋಡಿನ ಮೇಲ್ಸೇತುವೆಯಡಿ ನಡೆದ ಕಾರ್ಯಕ್ರಮದಲ್ಲಿ ಕೆಲ ಕಾಲ ಹೆದ್ದಾರಿಯನ್ನು ತಡೆದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಆಳುವ ಪಕ್ಷವಾದ ಬಿಜೆಪಿಯನ್ನು ಕಟುವಾಗಿ ಟೀಕಿಸಿದರು.
ಈ ಸಂದರ್ಭ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯದರ್ಶಿ ರವಿಕಿರಣ್ ಪುಣಚ, ಗ್ರಾಮೀಣ ಜನರ ಬೆವರಿನ ಹಣದಲ್ಲಿ ಅಧಿಕಾರವನ್ನು ನಡೆಸುವ ಸರ್ಕಾರಗಳು, ರೈತರ ವಿಚಾರದಲ್ಲಿ ಹೃದಯಹೀನವಾಗಿದೆ ಎಂದರು.
ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡೀಸ್, ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಪ್ರಾಂತ ರೈತಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ವಿವಿಧ ಸಂಘಟನೆಗಳ ಪ್ರಮುಖರಾದ ಕೃಷ್ಣಪ್ಪ ಸಾಲಿಯಾನ್, ,ವಸಂತ ಆಚಾರಿ, ತುಳಸೀದಾಸ್, ಪದ್ಮಾವತಿ ಶೆಟ್ಟಿ, ಸನ್ನಿ ಡಿಸೋಜ, ವಾಸುದೇವ ಉಚ್ಚಿಲ, ಲೋಕಯ್ಯ, ಸದಾಶಿವ ದಾಸ್, ಅಲ್ತಾಫ್ ತುಂಬೆ, ಜಯಂತ್ ನಾಯ್ಕ್, ಶಾಹುಲ್ ಹಮೀದ್, ಹಾರೂನ್ ರಶೀದ್, ಆಲ್ವಿನ್ ಲೊಬೊ, ಪ್ರಭಾಕರ ದೈವಗುಡ್ಡೆ, ಕನ್ಸೆಪ್ಟ ಡೆಸ, ವೆಂಕಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಕೇಂದ್ರ ವಿರುದ್ಧ ರೈತಸಂಘದಿಂದ ಬಂಟ್ವಾಳದಲ್ಲಿ ಹೆದ್ದಾರಿ ತಡೆ"