



ಬಂಟ್ವಾಳ: ಸುದೀರ್ಘ ವರ್ಷಗಳ ಕಾಲ ಬಿ.ಸಿ.ರೋಡಿನ ಧಾರ್ಮಿಕ ಚಟುವಟಿಕೆಗಳ ರೂವಾರಿಯಾಗಿದ್ದ ಉದ್ಯಮಿ ದಾಮೋದರ ರಾವ್ (78) ಶನಿವಾರ ನಿಧನಹೊಂದಿದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಬಂಧು ವರ್ಗವನ್ನು ಅವರು ಅಗಲಿದ್ದಾರೆ. ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾಗಿ ಸುದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿದ್ದ ಅವರು, ಕೈಕುಂಜೆಯಲ್ಲಿ ಹಿಂದು ರುದ್ರಭೂಮಿಯನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದರು. ಬಿ.ಸಿ.ರೋಡಿನ ಕೈಕುಂಜೆ ಪೂರ್ವ ಬಡಾವಣೆಯಲ್ಲಿರುವ ಕೈಕುಂಜೆ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದರು. ಬ್ಯಾಗು ತಯಾರಿಕಾ ಉದ್ಯಮವನ್ನು ಬಿ.ಸಿ.ರೋಡಿನಲ್ಲಿ ನಡೆಸುತ್ತಿದ್ದ ಅವರು ಬಿ.ಸಿ.ರೋಡಿನಲ್ಲಿ ಎಸ್.ಆರ್. ಕಾಂಪ್ಲೆಕ್ಸ್ ನಿರ್ಮಿಸುವ ಮೂಲಕ ಬಹುಮಹಡಿಯ ವಾಣಿಜ್ಯ ಸಂಕೀರ್ಣವನ್ನು ದಶಕಗಳ ಹಿಂದೆಯೇ ನಿರ್ಮಿಸಿ ಗಮನ ಸೆಳೆದಿದ್ದರು. ಸಮಾಜಸೇವಕರಾಗಿ, ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು.




Be the first to comment on "ಬಿ.ಸಿ.ರೋಡಿನ ಉದ್ಯಮಿ ದಾಮೋದರ ರಾವ್ ನಿಧನ"