ಬಂಟ್ವಾಳ: ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಯುವಕನೋರ್ವ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಬರಿಮಾರು ಗ್ರಾಮದ ಮಾದುಗುರಿ ನಿವಾಸಿ ನವೀನ (23) ಮೃತಪಟ್ಟ ಯುವಕ. ಈತ ಮಾರ್ಚ್ 2ರಂದು ಬೆಳಗ್ಗೆ 6 ಗಂಟೆಗೆ ಮನೆಯಿಂದ ಕೂಲಿ ಕೆಲಸಕ್ಕೆಂದು ಹೋಗುತ್ತೇನೆ ಎಂದು ತೆರಳಿದ್ದ. ಕೆಲ ಗಂಟೆಗಳ ಬಳಿಕ ತಾಯಿಗೆ ದೂರವಾಣಿ ಕರೆ ಮಾಡಿ ನಾನು ವಿಷ ಪದಾರ್ಥ ಸೇವಿಸಿದ್ದಾಗಿಯೂ ಕೊಂಕಣಪದವು ಎಂಬಲ್ಲಿ ಗುಡ್ಡೆಯಲ್ಲಿರುವುದಾಗಿಯೂ ತಿಳಿಸಿದ್ದಾನೆ. ಕೂಡಲೇ ಮನೆಯವರು ಈತನನ್ನು ಮಾಣಿ ಸರ್ಕಾರಿ ಆಸ್ಪತ್ರೆ ಅಲ್ಲಿಂದ ಮಂಗಳೂರು ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ.5ರಂದು ಈತ ಮೃತಪಟ್ಟಿದ್ದಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
Be the first to comment on "ವಿಷ ಪದಾರ್ಥ ಸೇವಿಸಿ ಯುವಕ ಆತ್ಮಹತ್ಯೆ"