ಬಂಟ್ವಾಳ: ಕಂದಾಯ ಇಲಾಖೆಯಲ್ಲಿ ಸುದೀರ್ಘ ಕರ್ತವ್ಯ ನಿರ್ವಹಿಸಿದ ಆಹಾರ ಶಾಖೆ ಶಿರಸ್ತೇದಾರ್ ಶ್ರೀನಿವಾಸ್ ಮತ್ತು ಬೆರಳಚ್ಚುಗಾರರಾದ ಸತ್ಯಶಂಕರಿ ಅವರನ್ನು ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ಬೀಳ್ಕೊಡಲಾಯಿತು.
ತಾಲೂಕು ಕಚೇರಿಯ ವಿವಿಧ ಸಿಬ್ಬಂದಿ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ಯಾವುದೇ ದೂರುಗಳು ಬಾರದಂತೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ ಆಹಾರ ಶಿರಸ್ತೇದಾರರಾದ ಶ್ರೀನಿವಾಸ್ ಮತ್ತು ಬೆರಳಚ್ಚುಗಾರರಾದ ಸತ್ಯಶಂಕರಿಯವರನ್ನು ಬೀಳ್ಕೊಡುತ್ತಿದ್ದೇವೆ, ಇವರಿಬ್ಬರ ನಿವೃತ್ತಿ ಜೀವನ ಸುಗಮವಾಗಿರಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭ ವಿಟ್ಲ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ ಮಾತನಾಡಿ, ಶುಭ ಹಾರೈಸಿದರು. ಕೇಂದ್ರ ಸ್ಥಾನೀಯ ಶಿರಸ್ತೇದಾರ್ ಅಣ್ಣು ನಾಯ್ಕ್, ಶ್ರೀನಿವಾಸ ಅವರ ಪತ್ನಿ ವಿಜಯಲಕ್ಷ್ಮೀ, ಸತ್ಯ ಶಂಕರಿ ಅವರ ಪತಿ ಮೋನಪ್ಪ ಗೌಡ
ಉಪಸ್ಥಿತರಿದ್ದರು.
ಗ್ರಾಮ ಲೆಕ್ಕಾಧಿಕಾರಿ ಜನಾರ್ದನ. ಜೆ ಸ್ವಾಗತಿಸಿದರು. ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ವಂದಿಸಿದರು. ನವ್ಯ ಎಸ್.ಎನ್ ರಾವ್ ಪ್ರಾರ್ಥಿಸಿದರು.
Be the first to comment on "ಬಂಟ್ವಾಳ ಕಂದಾಯ ಇಲಾಖೆಯಲ್ಲಿ ಬೀಳ್ಕೊಡುಗೆ ಸಮಾರಂಭ"