


ಬಂಟ್ವಾಳ: ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಶ್ರೀ ಕನಪ್ಪಾಡಿತ್ತಾಯ ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಸಭೆ ಕನಪಾಡಿತ್ತಾಯ ದೈವಸ್ಥಾನದಲ್ಲಿ ನಡೆಯಿತು. ಈ ಸಂದರ್ಭ ಕಳ್ಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಮಕ್ಷಮ ನೂತನ ವ್ಯವಸ್ಥಾಪನಾ ಸಮಿತಿ ರಚನೆಗೊಂಡಿದ್ದು ಅಧ್ಯಕ್ಷರಾಗಿ ರಮಾನಾಥೈ ರೈ ಕುಪ್ಪಿಲಗುತ್ತು ಆಯ್ಕೆಗೊಂಡರು. ಸದಸ್ಯರಾಗಿ ದಿವಾಕರ ಶೆಟ್ಟಿ ಪರಾರಿಗುತ್ತು, ಗುರುಪ್ರಸಾದ ಭಂಡಾರಿ ವಳವೂರುಗುತ್ತು, ಉಪೇಂದ್ರ ಮೂಲ್ಯ, ಪ್ರವೀಣ್ ಬಿ.ಸಿ.ರೋಡ್, ಚಂದ್ರಾವತಿ ಪುಡಿಕೆಲ್ಲಾಯಕೋಡಿ, ಕೆ.ವನಜ ಕಂಜತ್ತೂರು, ಮನೋಹರ ಕಂಜತ್ತೂರು, ಮನೋಜ್ ವಳವೂರು ಉಪಸ್ಥಿತರಿದ್ದರು.
Be the first to comment on "ಕನಪಾಡಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮಾನಾಥ ರೈ ಕುಪ್ಪಿಲಗುತ್ತು"