ಬಂಟ್ವಾಳದಲ್ಲಿ ಕನ್ನಡ ಭವನ ಲೋಕಾರ್ಪಣೆ, ತುಳು, ಕನ್ನಡ ಜತೆಗೂಡಿ ಬೆಳೆಸಲು ಕರೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಬಿ.ಸಿ.ರೋಡಿನ ಕೈಕುಂಜೆ ರಸ್ತೆಯಲ್ಲಿ ನಿರ್ಮಿಸಿದ ಕನ್ನಡ ಭವನ ಹಾಗೂ ಸಾರ್ವಜನಿಕ ರಂಗಮಂದಿರ ಲೋಕಾರ್ಪಣೆ ಶನಿವಾರ ಸೇರಿದ್ದ ಕನ್ನಡಾಭಿಮಾನಿಗಳ ಸಮ್ಮುಖ ನಡೆಯಿತು. ಇದರೊಂದಿಗೆ ಎರಡು ದಿನಗಳ ಕಾಲ ಬಿ.ಸಿ.ರೋಡಿನಲ್ಲಿ ನಡೆಯುವ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆಯೂ ದೊರಕಿತು. ಫೆ.21ರಂದು ಇದೇ ಜಾಗದಲ್ಲಿ ಬಂಟ್ವಾಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಇನ್ನಷ್ಟು ಚಿತ್ರಗಳು ಸುದ್ದಿಯ ಕೊನೆಯಲ್ಲಿವೆ.

ಆರಂಭದಲ್ಲಿ ಕನ್ನಡ ಭುವನೇಶ್ವರಿಯ ಮೆರವಣಿಗೆ ಬಿ.ಸಿ.ರೋಡಿನ ಕೈಕಂಬದಿಂದ ಕೈಕುಂಜೆವರೆಗೆ ನಡೆಯಿತು. ಜೋಡುಮಾರ್ಗ ಜೇಸಿ ಅಧ್ಯಕ್ಷ ಶೈಲಜಾ ರಾಜೇಶ್ ಭುವನೇಶ್ವರಿ ವೇಷಧಾರಿಯಾಗಿ ತೆರೆದ ಜೀಪಿನಲ್ಲಿ ಸಾಗಿ ಗಮನ ಸೆಳೆದರು. ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗ ಸಹಿತ ಚೆಂಡೆ, ಪಥ ಸಂಚಲನ ಮೆರವಣಿಗೆಯಲ್ಲಿ ಕಂಡುಬಂತು. ಮೆರವಣಿಗೆಗೆ ಪುರಸಭಾಧ್ಯಕ್ಷ ಮಹಮ್ಮದ್ ಶರೀಪ್ ಚಾಲನೆ ನೀಡಿದರು. ಮೊಡಂಕಾಪು ಇನ್ಫೆಂಟ್ ಜೀಸಸ್ ಧರ್ಮಗುರು ರೆ.ಫಾ.ವಲೇರಿಯನ್ ಡಿಸೋಜ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆಗೈದರು. ಮಿಥುನ್ ಮೊಡಂಕಾಪು, ಅಜಿತ್ ಪಾಣೆಮಂಗಳೂರು ನಿರ್ವಹಿಸಿದ ಮೆರವಣಿಗೆ ಕಾರ್ಯಕ್ರವನ್ನು ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ನಿರೂಪಿಸಿದರು.

ಬಳಿಕ ಕನ್ನಡ ಭವನ ಸಂಕೀರ್ಣದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕ ರಂಗಮಂದಿರವನ್ನು ಉದ್ಘಾಟಿಸಿ, ಆಶೀರ್ಚನ ನೀಡಿ ಕನ್ನಡ ಮತ್ತು ತುಳು ಈ ಜಿಲ್ಲೆಯ ಜನತೆಗೆ ಇಬ್ಬರು ತಾಯಿ ಇದ್ದ ಹಾಗೆ.ತುಳು ಭಾಷೆ 8 ಪರಿಚ್ಚೇದಕ್ಕೆ ಸೇರ್ಪಡೆಯ ಜೊತೆಗೆ ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯಾಗಿ ಘೋಷಿಸಬೇಕು ಎಂಬುದು ಈ ಸಮ್ಮೇಳನದ ಧ್ಯೇಯವಾಗಬೇಕು ಎಂದರು. ಸುಜಾತಾ ಕುಮಾರಿ ಕೈಕುಂಜೆ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

ಬಳಿಕ ತಹಶೀಲ್ದಾರ್ ರಶ್ಮೀ ಎಸ್.ಆರ್. ಉಪಸ್ಥಿತಿಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪರಿಷತ್ ಧ್ವಜಾರೋಹಣ, ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್ ಕನ್ನಡ ಧ್ವಜಾರೋಹಣ ಮಾಡಿದರು. ಉಮೇಶ್ ಎನ್. ಮೊಡಂಕಾಪು ಮತ್ತು ಪ್ರೇಮಚಂದ್ರ ಪಾಣೆಮಂಗಳೂರು ನಿರ್ವಹಿಸಿದ ಕಾರ್ಯಕ್ರಮವನ್ನು ವಿ.ಸು.ಭಟ್ ನಿರೂಪಿಸಿದರು.

ಇದಾದ ಬಳಿಕ ಪಂಜೆ ಮಂಗೇಶರಾವ್, ಬಿ.ವಿ.ಕಾರಂತ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ನೀರ್ಪಾಜೆ ಭೀಮ ಭಟ್ಟರ ಭಾವಚಿತ್ರಗಳನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅನಾವರಣ ಮಾಡಿದರು.  ದಾನಿಗಳ ನಾಮಫಲಕವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅನಾವರಣ ಮಾಡಿದರು. ಬಂಟ್ವಾಳದ 5 ಕೋಟಿ ಗೆ 3 ಕೋಟಿ ರೂ ಸೇರಿಸಿ ನಿರ್ಮಾಣವಾಗುತ್ತಿರುವ ಪಂಜೆ ಭವನ ಭಾಗಶ:ಕಾಮಗಾರಿ ಪೂರ್ಣಗೊಂಡು ಈಗ ಆರ್ಧಕ್ಕೆ ನಿಂತಿದೆ ಎಂದರು.

ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ತಾಲೂಕು ಸಮ್ಮೇಳನಗಳ ಅಧ್ಯಕ್ಷರ ಭಾವಚಿತ್ರ ಅನಾವರಣ ಮಾಡಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಯಕ್ಷಕಲಾವಿದ ಗೋವಿಂದ ಭಟ್ಟರ ಭಾವಚಿತ್ರ ಅನಾವರಣ ನಡೆಯಿತು. ಬಳಿಕ ಅವರನ್ನು ಉದ್ಯಮಿ ಎರ್ಕಳ ರಘುನಾಥ ಸೋಮಯಾಜಿ ಸನ್ಮಾನಿಸಿದರು. ಮಹಮ್ಮದ್ ಯಾಸೀರ್ ಅವರ ಕಲ್ಲಡ್ಕ ಮ್ಯೂಸಿಯಂ ಅನ್ನು ಶೃಂಗೇರಿ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಗೋವಿಂದ ಭಟ್, ಶುದ್ಧ ಕನ್ನಡ ಭಾಷಾ ಪ್ರಯೋಗ ಮಾಡುವ ಯಕ್ಷಗಾನಕ್ಕೆ ಸಾಹಿತ್ಯ ಸಮ್ಮೇಳನಗಳಲ್ಲಿ ಆದ್ಯತೆ ನೀಡಬೇಕು, ಯಕ್ಷಗಾನಕ್ಕೆ ಮನ್ನಣೆ ದೊರಕಬೇಕು ಎಂದರು.

ಜಾಹೀರಾತು

ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಕೇಮಾರು ಶ್ರೀಗಳು ಮಾತನಾಡಿ, ಕನ್ನಡ ಮತ್ತು ತುಳು ನಮ್ಮ ಉಸಿರಾಗಬೇಕು,  ಭಾಷೆಯಿಂದ ಸಂಸ್ಕೃತಿ ಉಳಿಯುತ್ತದೆ , ಜಾತಿ,ಭಾಷೇಗಾಗಿ ಜಗಳ‌ ದೇಶದ ಪ್ರಗತಿಯನ್ನು ಕುಂಠಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ತಾಪಂ ಉಪಾಧ್ಯಕ್ಷ ಅಬ್ವಾಸ್ ಆಲಿ, ಷದ ಭುವನಾಭಿಮಾರ ಉಡುಪ, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಬಿ.ಸಿ.ರೋಡ್ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹರೀಶ ಮಾಂಬಾಡಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಬಸ್ತಿ ವಾಮನ ಶೆಣೈ, ತುಳು ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಸ್ವಾಗತ ಸಮಿತಿ ಅಧ್ಯಕ್ಷ ಐತಪ್ಪ ಆಳ್ವ, ಆಳ್ವ,ಕಸಾಪ ಗೌರವ ಕಾರ್ಯದರ್ಶಿ ಡಾ.ನಾಗವೇಣಿ ಮಂಚಿ, ಪ್ರಮುಖರಾದ ಸುದರ್ಶನ ಜೈನ್ ಉಪಸ್ಥಿತರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ 20 ವರ್ಷಗಳ ಹಿಂದೆ ಆಗಿನ ತಾಲೂಕು ಕಸಾಪ ಅಧ್ಯಕ್ಷರಾಗಿದ್ದ ನೀರ್ಪಾಜೆ ಭೀಮ ಭಟ್ ಅವರು ಕನ್ನಡಭವನದ ಕನಸನ್ನು ಕಂಡು ಜಮೀನು ಗುರುತಿಸಿ ಶಿಲಾನ್ಯಾಸ ನೆರವೇರಿಸಿದ್ದರು.ಅವರ ಆ ಕನಸು ಕನ್ನಡಭವನ ಲೋಕಾರ್ಪಣೆಯ ಮೂಲಕ ನೆರವೇರಿದೆ ಎಂದರು. ಸ್ವಾಗತ ಸಮಿತಿ  ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ರಾಮಚಂದ್ರ ರಾವ್ ಮತ್ತು ಶಿಕ್ಷಕ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ಶರ್ಮ ಅನಾರು ಮತ್ತು ಡಿ.ಬಿ.ಅಬ್ದುಲ್ ರಹಿಮಾನ್ ತುಂಬೆ ನಿರ್ವಹಿಸಿದರು.

ಚಿತ್ರಗಳು: ಸತೀಶ್ ಕುಮಾರ್, ಕಾರ್ತಿಕ್ ಸ್ಟುಡಿಯೋ, ಬಿ.ಸಿ.ರೋಡ್

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಂಟ್ವಾಳದಲ್ಲಿ ಕನ್ನಡ ಭವನ ಲೋಕಾರ್ಪಣೆ, ತುಳು, ಕನ್ನಡ ಜತೆಗೂಡಿ ಬೆಳೆಸಲು ಕರೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*