ಬಂಟ್ವಾಳ: ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಪಾಲ್ದಡ್ಕದಿಂದ ಹಿರ್ಣಿ- ಸಿದ್ದಯ್ಯಕೋಡಿ ಮೂಲಕ ರಾಯಿ ಹೋರಂಗಳಕ್ಕೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ ರಚನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಸೋಮವಾರ ಶಿಲಾನ್ಯಾಸ ನೆರವೇರಿಸಿದರು.
ಗಡಿನಾಡು ಅಭಿವೃದ್ಧಿ ಯೋಜನೆಯಲ್ಲಿ ರೂ.೫೦ ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಈ ಸಂಧರ್ಭ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಪಂಚಾಯತ್ ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ, ಚಂದ್ರಹಾಸ ಪೂಜಾರಿ, ತುಂಗಮ್ಮ, ದನ್ಯ, ಜನಾರ್ಧನ ಮೇಸ್ತ್ರಿ, ರಂಜನ್ ಕುಮಾರ್ ಶೆಟ್ಟಿ, ಸುಕುಮಾರ್ ಶೆಟ್ಟಿ, ಆನಂದ ಮೇಲಾಂಟ, ಉಮೇಶ್ ಡಿ.ಎಂ. ಶಾಂಭವಿ, ವಿಶ್ವನಾಥ ಆಚಾರ್ಯ, ಪುಪ್ಪರಾಜ್ ಸಂಗಬೆಟ್ಟು ಉಪಸ್ಥಿತರಿದ್ದರು.
Be the first to comment on "ರಾಯಿ ಹೋರಂಗಳ ಸಂಪರ್ಕ ರಸ್ತೆ ರಚನೆಗೆ ಶಿಲಾನ್ಯಾಸ"