



ಮಂಗಳೂರು: ಚಿನ್ನ ಕಳ್ಳಸಾಗಾಟದ ಮತ್ತೊಂದು ಪ್ರಕರಣವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ. ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಮಡಿಕೇರಿಯ ಉಬೈದ್ ಬಲಿಯತ್ ಅಝೀಝ್ ಬಂಧಿತ ಆರೋಪಿ. ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಚಿನ್ನವನ್ನು ಪೇಸ್ಟ್ ರೂಪದಲ್ಲಿ ಗುದದ್ವಾರದಲ್ಲಿ ಅಡಗಿಸಿಟ್ಟು ಸಾಗಾಟ ಮಾಡಿದ್ದ ಈತನಿಂದ 44.02 ಲಕ್ಷ ರೂ. ಮೌಲ್ಯದ 0.8 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.
Be the first to comment on "ಮತ್ತೆ ಚಿನ್ನ ಕಳ್ಳಸಾಗಾಟ ಪ್ರಕರಣ ಪತ್ತೆ: ದುಬೈನಿಂದ ಹೇಗೆ ತಂದಿದ್ದ ಗೊತ್ತಾ?"