



ಬಂಟ್ವಾಳ: ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಚಿನಿವಾರ್ತೆ ಅನಂತರಾಯ ಪೈ ಮತ್ತು ಕುಟುಂಬಸ್ಥರ ಸೇವಾರ್ಥ, ಹನುಮಗಿರಿ ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ 6.30ಕ್ಕೆ ಶ್ರೀದೇವಳದ ನೇತ್ರಾವತಿ ನದಿ ದೀರತ ವಟವೃಕ್ಷದ ಸಮೀಪ ಭವ್ಯವಾದ ವೇದಿಕೆಯಲ್ಲಿ ನಡೆಯುವ ಯಕ್ಷಗಾನದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ನಡೆಸಲಾಗುವುದು, ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಂಡು ಸಹಕರಿಸಬೇಕು, ಕಲಾಭಿಮಾನಿಗಳು ಆಗಮಿಸಿ, ಭೋಜನ ಪ್ರಸಾದ ಸ್ವೀಕರಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕು ಎಂದು ಪ್ರಕಟಣೆ ತಿಳಿಸಿದೆ.
Be the first to comment on "ಬಂಟ್ವಾಳದಲ್ಲಿ ಜ.17ರಂದು ಸಂಜೆ ಶ್ರೀದೇವಿ ಮಹಾತ್ಮೆ ಯಕ್ಷಗಾನ"