ಬಂಟ್ವಾಳ: ಕಳೆದ ಆರೇಳು ವರ್ಷಗಳಿಂದ ರಾಜ್ಯದಲ್ಲಿ ವ ಸತಿ ಯೋಜನೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ಅನುದಾನವನ್ನೇ ಇಟ್ಟಿರಲಿಲ್ಲ. ಇಡೀ ರಾಜ್ಯದಲ್ಲಿ ೧೦ ಲಕ್ಷ ಮನೆಗಳ ನಿರ್ಮಾಣಕ್ಕೆ ಯೋಜನೆ ಕಲ್ಪಿಸಲಾಗುವುದು ಹಾಗೂ ಈ ವರ್ಷದ ಜುಲೈ ತಿಂಗಳೊಳಗೆ 97 ಸಾವಿರ ಕುಟುಂಬಗಳಿಗೆ ನಿವೇಶನ ಹಂಚಲಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಶುಕ್ರವಾರ ಬಂಟ್ವಾಳದ ನರಿಕೊಂಬು ಶ್ರೀ ವೀರಭದ್ರ ಕ್ಷೇತ್ರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 10 ಲಕ್ಷ ಮನೆಗಳ ಗುರಿ ಇದೆ. ೩೫೬೦ ಎಕರೆಗೂ ಮಿಕ್ಕಿ ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನ ಹಂಚಿಕೆಗೆ ಜಾಗ ಖರೀದಿಸಲಾಗಿದ್ದು, ಅಲ್ಲಿ ಮೂಲಸೌಕರ್ಯಕ್ಕೆ ಬೇಕಾದ ಅನುದಾನವನ್ನು ಬಜೆಟ್ ನಲ್ಲಿ ಸೇರ್ಪಡೆ ಮಾಡಲಾಗುತ್ತದೆ ಎಂದರು. ವಸತಿ ಯೋಜನೆಯಲ್ಲಿನ ಎಲ್ಲಾ ಅವ್ಯವಹಾರಗಳ ವಿರುದ್ಧ ಕ್ರಮಕೈಗೊಳ್ಳುವ ಕೆಲಸ ಮಾಡಿದ್ದೇನೆ ಎಂದ ಅವರು, ದ.ಕ., ಉತ್ತರ ಕನ್ನಡ ಭಾಗದಲ್ಲಿ ವಸತಿ ಯೋಜನೆಯಲ್ಲಿ ಹೆಚ್ಚಿನ ಅವ್ಯವಹಾರ ನಡೆಯದೇ ಇರುವುದು ಹೆಮ್ಮೆಯ ಸಂಗತಿ ಎಂದರು. ೮೫೦೦ಕ್ಕೂ ಅಧಿಕ ಎಕರೆ ಜಾಗದಲ್ಲಿ ಸ್ಲಮಗಳಲ್ಲಿ ವಾಸಿಸುವ ೩.೧೨ ಲಕ್ಷ ಕುಟುಂಬಗಳಿಗೆ ಶೀಘ್ರದಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ ಎಂದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಜತೆಗಿದ್ದರು
Be the first to comment on "ರಾಜ್ಯದಲ್ಲಿ 10 ಲಕ್ಷ ಮನೆಗಳ ನಿರ್ಮಾಣಕ್ಕೆ ಯೋಜನೆ: ವಸತಿ ಸಚಿವ ವಿ.ಸೋಮಣ್ಣ"