ಆರೋಗ್ಯ ನಿರೀಕ್ಷಕರೂ ಇಲ್ಲ, ಪರಿಸರ ಎಂಜಿನಿಯರೂ ಇಲ್ಲ – ಪುರಸಭೆ ಮೀಟಿಂಗ್ ನಲ್ಲಿ ಸದಸ್ಯರ ಕಳವಳ
ವರ್ಷಗಳಿಂದ ಪುರಸಭೆಯ ಪ್ರತಿ ಮೀಟಿಂಗ್ ಗಳಲ್ಲೂ ಚರ್ಚೆಯಾಗುವ ತ್ಯಾಜ್ಯ ವಿಲೇವಾರಿ, ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದು, ಕಂಚಿನಡ್ಕಪದವು ಬುಧವಾರ ನಡೆದ ಬಂಟ್ವಾಳ ಪುರಸಭೆ ಮೀಟಿಂಗ್ ನಲ್ಲೂ ಚರ್ಚೆಗೆ ವಸ್ತುವಾಯಿತು. ಇದಕ್ಕೊಂದು ಹೊಸ ಸೇರ್ಪಡೆ ಬಂಟ್ವಾಳ ಪುರಸಭೆಯ ಆರೋಗ್ಯ ನಿರೀಕ್ಷಕರು ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಮತ್ತು ಅವರು ಕೊಟ್ಟಿದ್ದಾರೆ ಎನ್ನಲಾದ ತಪ್ಪೊಪ್ಪಿಗೆ. ಈ ವಿಷಯವನ್ನು ವಿಪಕ್ಷದ ಎ.ಗೋವಿಂದ ಪ್ರಭು ಪ್ರಸ್ತಾಪಿಸಿದರೆ, ಅಧ್ಯಕ್ಷ ಮಹಮ್ಮದ್ ಶರೀಪ್ ಪ್ರಕರಣದ ಕುರಿತು ಮಾಹಿತಿ ನೀಡಿದರು.
ಆರೋಗ್ಯ ನಿರೀಕ್ಷಕರು ಈಗ ಕರ್ತವ್ಯಕ್ಕೆ ಹಾಜರಾಗದೇ ಇರುವುದು ಹಾಗೂ ತ್ಯಾಜ್ಯ ವಿಲೇವಾರಿ ಸಹಿತ ಆ ವಿಭಾಗಕ್ಕೆ ಸಂಬಂಧಿಸಿದ ಕೆಲಸಗಳು ನಡೆಯದೇ ಇರುವುದರ ಕುರಿತು ಸದಸ್ಯರು ಕಳವಳ ವ್ಯಕ್ತಪಡಿಸಿದರು.
ಕಸದ ಸಮಸ್ಯೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದರೂ ಆರೋಗ್ಯ ನಿರೀಕ್ಷಕರು ಹಲವು ದಿನಗಳಿಂದ ಕಚೇರಿಗೆ ಬರುತ್ತಿಲ್ಲ. ಉಳಿದವರಲ್ಲಿ ಕೇಳಿದರೆ ಸಕಾರಾತ್ಮಕ ಸ್ಪಂದನೆ ದೊರಕುತ್ತಿಲ್ಲ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಮಾತಿನ ಚಕಮಕಿಯೂ ನಡೆದು ಆರೋಪ ಪ್ರತ್ಯಾರೋಪಗಳು ಕೇಳಿ ಬಂದವು. ಡೆಪ್ಯುಟೇಶನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ನಿರೀಕ್ಷಕರನ್ನು ಬೇರೆಡೆಗೆ ಕಳುಹಿಸಿ, ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಪರಿಸರ ಎಂಜಿನಿಯರ್ ಅವರನ್ನು ಮತ್ತೆ ಬಂಟ್ವಾಳಕ್ಕೆ ಕರೆಸುವಂತೆ ಸದಸ್ಯರು ಒತ್ತಾಯಿಸಿದರು.
ಪ.ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿಯಡಿ ಸಬ್ಸಿಡಿ ನೀಡುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ ಆದರೆ ಬ್ಯಾಂಕ್ ಅಧಿಕಾರಿಗಳು ನಿರಾಕರಿಸುತ್ತಾರೆ ಎಂದು ಸದಸ್ಯ ಜನಾರ್ದನ ಚೆಂಡ್ತಿಮಾರ್ ಆರೋಪಿಸಿದರು. ಕಂಚಿನಡ್ಕಪದವು ತ್ಯಾಜ್ಯ ವಿಲೇವಾರಿ ಇನ್ನೂ ಸಮರ್ಪಕವಾಗಿ ಆಗಿಲ್ಲ, ಪಾಣೆಮಂಗಳೂರು, ತಲಪಾಡಿ, ಕೈಕಂಬ, ಮೆಲ್ಕಾರ್ ರಸ್ತೆ ಬದಿ ಡಂಪಿಂಗ್‌ಯಾರ್ಡ್ ಆಗುತ್ತಿದೆ. ಎನ್ನುವ ದೂರುಗಳು ಕೇಳಿ ಬಂದವು. ಪುರಸಭಾ ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯಗಳ ಸೀವೇಜ್ ಟ್ರಿಟ್‌ಮೆಂಟ್ ಪ್ಲಾಂಟ್(ಎಸ್‌ಟಿಪಿ)ಗಳ ಕುರಿತು ಸದಸ್ಯ ಲುಕ್ಮಾನ್ ಸಭೆ ಗಮನ ಸೆಳೆದರು, ಅಧ್ಯಕ್ಷ ಮಹಮ್ಮದ್ ಶರೀಫ್ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ಉಪಸ್ಥಿತರಿದ್ದರು. ಸದಸ್ಯರಾದ ರಾಮಕೃಷ್ಣ ಆಳ್ವ, ಗೋವಿಂದ ಪ್ರಭು, ವಾಸು ಪೂಜಾರಿ, ಮಹಮ್ಮದ್ ನಂದರಬೆಟ್ಟು, ಗಂಗಾಧರ ಪೂಜಾರಿ, ಹಸೈನಾರ್, ಲುಕ್ಮಾನ್, ಮುನೀಶ್ ಆಲಿ, ಇದ್ರೀಸ್, ಜನಾರ್ದನ ಚೆಂಡ್ತಿಮಾರ್, ಗಾಯತ್ರಿ ಪ್ರಕಾಶ್, ವಿದ್ಯಾವತಿ, ಹರಿಪ್ರಸಾದ್, ಸಿದ್ದೀಕ್ ಗುಡ್ಡೆಯಂಗಡಿ ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು.
Be the first to comment on "ತ್ಯಾಜ್ಯ, ಪರಿಸರ ಮಾಲಿನ್ಯವಾದರೆ ಬಂಟ್ವಾಳದಲ್ಲಿ ಯಾರಿಗೆ ದೂರು ನೀಡಬೇಕು?"