ಬಂಟ್ವಾಳ: ಎಸ್ಸೆಸ್ಸಫ್ ಮಂಚಿ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಆದಿತ್ಯವಾರದಂದು ಸುನ್ನೀ ಮಹಲ್ ಮಂಚಿಯಲ್ಲಿ ಸೆಕ್ಟರ್ ಅಧ್ಯಕ್ಷರಾದ ಝುಬೈರ್ ಸಂಪಿಲರವರ ಅಧ್ಯಕ್ಷತೆಯಲ್ಲಿ ನಡೆಯಿತು, ಎಣ್ಮೂರ್ ಉಸ್ತಾದ್ ಪ್ರಾರ್ಥನೆಗೈದು ಸಭೆಯನ್ನು ಉದ್ಘಾಟಿಸಿದರು, ಕಾರ್ಯದರ್ಶಿ ಲುಕ್ಮಾನ್ ಕುಕ್ಕಾಜೆ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ನೌಫಳ್ ಕಟ್ಟತ್ತಿಲ ವರದಿ ವಾಚಿಸಿ, ಕೋಶಾಧಿಕಾರಿ ಜಾಬಿರ್ ಮೋಂತಿಮಾರ್ ಲೆಕ್ಕಪತ್ರ ಮಂಡಿಸಿದರು.
ಡಿವಿಶನ್ ವೀಕ್ಷಕರಾಗಿ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ವೆಸ್ಟ್ ಝೋನ್ ಉಪಾಧ್ಯಕ್ಷರಾದ ಅಕ್ಬರ್ ಅಲಿ ಮದನಿ, ವೆಸ್ಟ್ ಝೋನ್ ಕೋಶಾಧಿಕಾರಿ ಆಬಿದ್ ನಈಮಿ ಕಟ್ಟತ್ತಿಲ, ಬಂಟ್ವಾಳ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮೌಸೂಫ್ ಅಬ್ದುಲ್ಲಾ, ಅನ್ಸಾರ್ ಕಾರಾಜೆ ಆಗಮಿಸಿದ್ದರು, ರಫೀಕ್ ಝುಹ್‌ರಿ ಮಂಚಿ ಉಪಸ್ಥಿತರಿದ್ದರು.
ಸಾಲೆತ್ತೂರ್ ಸೆಕ್ಟರ್ ಅಸ್ತಿತ್ವಕ್ಕೆ: ಎಸ್.ಎಸ್.ಎಫ್ ಬಂಟ್ವಾಳ ಡಿವಿಷನ್‌ನ ಐದನೇ ಸೆಕ್ಟರ್ ಆಗಿ ಸಾಲೆತ್ತೂರ್ ಸೆಕ್ಟರ್ ಅಸ್ತಿತ್ವಕ್ಕೆ ತರಲಾಯಿತು.
ನೂತನ ಸಮಿತಿ ರಚನೆ: ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ಇದರ ಅಧ್ಯಕ್ಷರಾಗಿ ಝುಬೈರ್ ಸಂಪಿಲ, ಪ್ರಧಾನ ಕಾರ್ಯದರ್ಶಿಯಾಗಿ ಲುಕ್ಮಾನ್ ಕುಕ್ಕಾಜೆ, ಕೋಶಾಧಿಕಾರಿಯಾಗಿ ಫರ್ವಾಝ್ ಮಂಚಿ, ಉಪಾಧ್ಯಕ್ಷರುಗಳಾಗಿ ತ್ವಯ್ಯಿಬ್ ಮುಸ್ಲಿಯಾರ್, ರವೂಫ್ ಕುಕ್ಕಾಜೆ ಕಾರ್ಯದರ್ಶಿಗಳಾಗಿ ಅರ್ಫಾಝ್ ಕಯ್ಯೂರ್, ಜಾಬಿರ್ ಪಡ್ಪು, ಜಾಬಿರ್ ನೂಜಿ ಹಾಗೂ 14 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ಎಸ್ಸೆಸ್ಸಫ್ ಸಾಲೆತ್ತೂರು ಸೆಕ್ಟರ್ ಅಧ್ಯಕ್ಷರಾಗಿ ನಾಸಿರ್ ಲತೀಫಿ ಕಟ್ಟತ್ತಿಲ, ಪ್ರಧಾನ ಕಾರ್ಯದರ್ಶಿಯಾಗಿ ನೌಫಳ್ ಕಟ್ಟತ್ತಿಲ ಕೋಶಾಧಿಕಾರಿಯಾಗಿ ಫಾರೂಕ್ ಟಿ.ಯು ನಗರ ಉಪಾಧ್ಯಕ್ಷರುಗಳಾಗಿ ಹೈದರ್ ಲತೀಫಿ, ಹನೀಫ್ ಬಿ.ಎಚ್ ನಗರ, ಕಾರ್ಯದರ್ಶಿಗಳಾಗಿ ಮಸೂದ್ ಮಿತ್ತರಾಜೆ, ಶಫೀಕ್ ಕಟ್ಟತ್ತಿಲ, ಹಾಫಿಳ್ ಬಿ.ಎಚ್ ನಗರ ಹಾಗೂ 12 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ಸಾಲೆತ್ತೂರ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಫಳ್ ಕಟ್ಟತ್ತಿಲ ವಂದಿಸಿದರು.
Be the first to comment on "ಎಸ್ಸೆಸ್ಸಫ್ ಮಂಚಿ ಸೆಕ್ಟರ್ ಮಹಾ ಸಭೆ ಸಾಲೆತ್ತೂರ್ ಸೆಕ್ಟರ್ ಅಸ್ತಿತ್ವಕ್ಕೆ"