ಬಂಟ್ವಾಳ: ಕೋವಿಡ್ -19 ನಿಂದಾಗಿ ಮನುಕುಲವೇ ತತ್ತರಿಸಿ ಹೋಗಿರುವ ಈ ಕಾಲ ಘಟ್ಟದಲ್ಲಿ ನಾವೆಲ್ಲಾ ನಮ್ಮ ಜೀವದ ರಕ್ಷಣೆಯೊಂದಿಗೆ ಅಗತ್ಯ ಸುರಕ್ಷತೆ ಕ್ರಮಗಳನ್ನು ಅನುಸರಿಸಿ ಜೀವನವನ್ನು ಸಾಗಿಸುವ ಅನಿವಾರ್ಯವಾಗಿದೆ.ಈ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣ ಅರ್ಧದಲ್ಲಿ ಮೊಟಕುಗೊಳಿಸಬಾರದು ಎಂಬ ಹಿನ್ನೆಲೆಯಲ್ಲಿ ಪರ-ವಿರೋದಗಳ ನಡುವೆ ಬಹುಮಟ್ಟಿಗೆ ಸಾರ್ವಜನಿಕ ಸಲಹೆಗಳನ್ನು ಪಡೆದು ಕೋವಿಡ್-19 ನಿಯಂತ್ರಣ ಸುರಕ್ಷತೆ ಕ್ರಮಗಳೊಂದಿಗೆ ಶಾಲೆ ಆರಂಭಕ್ಕೆ ಸರಕಾರ ಅವಕಾಶ ಮಾಡಿಕೊಟ್ಟಿದೆ.ಎಂದೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್,ಉಳಿಪಾಡಿ ಹೇಳಿದರು.
ಕೋವಿಡ್ -19 ನಂತರ ಪುನಾರಂಭಗೊಂಡ ಸಿದ್ದಕಟ್ಟೆ ಪ್ರೌಢ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಕೋವಿಡ್ -19 ನಿಯಂತ್ರಣ ಸುರಕ್ಷತೆ ಕ್ರಮಗಳನ್ನು ಪರಿಶೀಲಿಸಿ ಪೋಷಕರನ್ನು ಉದ್ದೇಶಿಸಿ ಮಾತಾನಾಡಿದರು.
ಶಾಲಾ ವಿಧ್ಯಾರ್ಥಿ ಗಳೊಂದಿಗೆ ಶಾಸಕರು ಸಂವಾದ ನಡೆಸುವ ಮೂಲಕ ಕೋವಿಡ್ ಪ್ರಯುಕ್ತ ರಜೆಯಲ್ಲಿನ ವಿಧ್ಯಾರ್ಥಿ ಗಳ ಯೋಗಕ್ಷೇಮ ವಿಚಾರಿಸಿದರು. ಶಾಲಾ ಮುಖ್ಯ ಶಿಕ್ಸಕಿ ಮತ್ತು ಶಿಕ್ಸಕರೊಂದಿಗೆ ಸಮಲೋಚನೆ ಮಾಡಿದ ಶಾಸಕರು ವಿಧ್ಯಾರ್ಥಿ ಗಳ ಆರೋಗ್ಯದಲ್ಲಿ ಏನಾದರೂ ಏರು-ಪೇರು ಕಂಡುಬಂದಲ್ಲಿ ತಕ್ಸಣದಿಂದಲೇ ಪರೀಕ್ಷೆ ಗೆ ಒಳಪಡಿಸಲು ಸೂಚಿಸಿದರು.ಮಾಸ್ಕ್ ಧರಿಸಿವುದರೊಂದಿಗೆ ಅಗತ್ಯ ಕೋವಿಡ್ ನಿಯಂತ್ರಣ ಸುರಕ್ಷತೆ ಕ್ರಮಗಳನ್ನು ಅನುಸರಿಸುವ ಮೂಲಕ ಜೀವನ ನಡೆಸುವುದು ಸೂಕ್ತ ಎಂದೂ ಪೋಷಕರು ಮತ್ತು ವಿಧ್ಯಾರ್ಥಿ ಗಳಲ್ಲಿ ವಿನಂತಿ ಮಾಡಿದರು
ಮಳೆಹಾನಿ ಅನುದಾನ ರೂ 20 ಲಕ್ಷ ದಿಂದ ಪುನರ್ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡವನ್ನುಇದೇ ಸಂದರ್ಭ ಪರಿಶೀಲಿಸಿದರು. ಬಂಟ್ವಾಳ ನಗರಾಭಿವೃದ್ದಿ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ಶಾಲಾಭಿವೃದ್ದಿ ಉಪಾದ್ಯಕ್ಸ ಉಮೇಶ್ ಗೌಡ, ಮಾಜಿ ಎಪಿಎಂಸಿ ಸದಸ್ಯ ರತ್ನಕುಮಾರ್ ಚೌಟ, ಗ್ರಾಮ ಪಂಚಾಯತ್ ಸದಸ್ಯ ರಾದ ಸತೀಶ್ ಪೂಜಾರಿ, ಸಂದೇಶ್ ಶೆಟ್ಟಿ, ಸುರೇಶ್ ಕುಲಾಲ್, ಉದಯ ಸಿದ್ದಕಟ್ಟೆ, ರಶ್ಮೀತ್ ಶೆಟ್ಟಿ ಕೈತ್ರೋಡಿ, ಸಂತೋಷ ರಾಯಿಬೆಟ್ಟು, ಗಣ್ಯರಾದ ಸಂಜೀವ ಶೆಟ್ಟಿ ಕರ್ಪೆ,ರಾಜೇಂದ್ರ ಕರ್ಪೆ ,ನವೀನ ಹೆಗ್ಡೆ, ರತ್ನಾಕರ ಮುಗೇರುಗುಡ್ಡೆ, ಮಾಜಿ ಸದಸ್ಯ ಎಸ್.ಪಿ.ಶ್ರೀದರ್. ಶಾಲಾ ಮುಖ್ಯ ಶಿಕ್ಸಕಿ ಲೋನಾ ಲೋಬೊ, ರಾಘವೇಂದ್ರ ಬಲ್ಲಾಳ್, ಸಹಶಿಕ್ಷಕರಾದ ರಮಾನಂದ, ಮಹೇಶ್ ಕರ್ಕೇರ ಈ ಸಂದರ್ಭ ಉಪಸ್ಥಿತರಿದ್ದರು.
Be the first to comment on "ಸುರಕ್ಷತಾ ಕ್ರಮ ಅನುಸರಿಸಿ, ಶಾಲೆಗೆ ಕಳುಹಿಸಿ: ಸಿದ್ಧಕಟ್ಟೆಯಲ್ಲಿ ಪೋಷಕರಿಗೆ ಶಾಸಕ ರಾಜೇಶ್ ನಾಯ್ಕ್ ಸಲಹೆ"