ಬಂಟ್ವಾಳ: ಹೊಸ ವರ್ಷದ ಆಚರಣೆಯ ಹೆಸರಿನಲ್ಲಿ ಡಿಸೆಂಬರ್ 31 ರ ರಾತ್ರಿ ಪ್ರಾಚೀನ ಕೋಟೆಗಳು ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಮದ್ಯಪಾನ ಮತ್ತು ಪಾರ್ಟಿಗಳನ್ನು ನಿಷೇಧಿಸಿವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಬಂಟ್ವಾಳ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಧೂಮ್ರಪಾನ, ಮದ್ಯಪಾನ, ಅಮಲು ಪದಾರ್ಥಗಳ ಸೇವನೆ ಮುಂತಾದವುಗಳ ಪ್ರಮಾಣ ಅಂದು ಅತ್ಯಂತ ಹೆಚ್ಚಾಗಿರುತ್ತದೆ. ಪ್ರಾಚೀನ ಕೋಟೆ, ಐತಿಹಾಸಿಕ ಸ್ಥಳಗಳಲ್ಲಿ ಮದ್ಯಪಾನ ಪಾರ್ಟಿಗಳ ಆಯೋಜನೆ ಮಾಡಲಾಗುತ್ತದೆ. ಈ ವರ್ಷ ಕೊರೋನಾ ಮಹಾಮಾರಿ ಎಲ್ಲಾ ಕಡೆಗಳಲ್ಲಿ ಹಾನಿಯನ್ನುಂಟು ಮಾಡಿದೆ. ಹೀಗಿರುವಾಗ ಡಿಸೆಂಬರ 31 ರಂದು ಆಚರಿಸಲಾಗುವ ಪಾರ್ಟಿಯಿಂದ ಕೊರೋನಾದ ಸೊಂಕು ಹೆಚ್ಚು ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಸಾರ್ವಜನಿಕರ ಆರೋಗ್ಯವನ್ನು ಅಪಾಯದಲ್ಲಿಡುವುದು ಯೊಗ್ಯವಲ್ಲ. ರಾಜ್ಯದಲ್ಲಿರುವ ಕೋಟೆಗಳು, ಪ್ರವಾಸಿತಾಣಗಳು, ಐತಿಹಾಸಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮ್ರಪಾನ, ಮದ್ಯ ಸೇವನೆಯನ್ನು ಮಾಡುವುದು, ಪಾರ್ಟಿಗಳನ್ನು ಮಾಡುವುದರ ಮೇಲೆ ನಿಷೇಧ ಹೇರುವಂತೆ ಆದೇಶವನ್ನು ನೀಡಬೇಕು. ಜೊತೆಗೆ ಇಂತಹ ಸ್ಥಳಗಳಲ್ಲಿ ಕಾನೂನು-ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ದಳವನ್ನು ನೇಮಿಸಿ ಸುಸಂಸ್ಕೃತ ಹಾಗೂ ನೀತಿವಂತ ಸಮಾಜವನ್ನು ನಿರ್ಮಿಸಲು ಸಹಕರಿಸಬೇಕು ಎಂದು ಬಂಟ್ವಾಳ ತಾಲೂಕಿನ ತಹಸೀಲ್ದಾರ್ ಅನಿತಾಲಕ್ಷ್ಮೀ ಅವರಿಗೆ ಮನವಿ ನೀಡಲಾಯಿತು. ಈ ಸಂದರ್ಭ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಅಜಿತ್ ಕುಮಾರ , ರಾಧಾಕೃಷ್ಣ, ಕಿರಣ ಕುಮಾರ, ಸಂಪತ್, ಪಾಲಾಕ್ಷ ಉಪಸ್ಥಿತರಿದ್ದರು ಎಂದು ಹಿಂದು ಜನಜಾಗೃತಿ ವೇದಿಕೆ ದ.ಕ.ಜಿಲ್ಲೆ ಸಮನ್ವಯಕಾರ ಚಂದ್ರ ಮೊಗೇರ ತಿಳಿಸಿದ್ದಾರೆ.
Be the first to comment on "ಪ್ರಾಚೀನ ಕೋಟೆ, ಐತಿಹಾಸಿಕ ಸ್ಥಳದಲ್ಲಿ ಮದ್ಯಪಾನ, ಪಾರ್ಟಿಗಳಿಗೆ ನಿಷೇಧಿಸುವಂತೆ ಮನವಿ"