ಮೆಲ್ಕಾರ್ ರಿಕ್ಷಾ ಪಾರ್ಕಿನಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಫ್ರೀಝರ್ ಘಟಕದ ಲೋಕಾರ್ಪಣೆ

ಮೆಲ್ಕಾರ್ ರಿಕ್ಷಾ ಪಾರ್ಕಿನಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಫ್ರೀಝರ್ ಘಟಕದ ಲೋಕಾರ್ಪಣೆ

ಬಂಟ್ವಾಳ: ಎಸ್ಸೆಸ್ಸೆಫ್ ದ.ಕ ಜಿಲ್ಲಾ ಘಟಕದ ವತಿಯಿಂದ ನೀಡಿದ ಮೆಲ್ಕಾರ್ ಪರಿಸರಕ್ಕೆ ಬಹುಕಾಲದ ಬೇಡಿಕೆಯಾದ ಸಾರ್ವಜನಿಕ ಕುಡಿಯುವ ನೀರಿನ ಫ್ರೀಝರ್ ಘಟಕದ ಉದ್ಘಾಟನೆಯು ಸೋಮವಾರ ರಿಕ್ಷಾ ಪಾರ್ಕಿನ ಬದಿಯಲ್ಲಿ ನೆರವೇರಿತು.

ಎಸ್ಸೆಸ್ಸೆಫ್ ಬಂಟ್ವಾಳ ಅಧ್ಯಕ್ಷರಾದ ಸಿದ್ದೀಕ್ ಸಅದಿಯವರು ಉದ್ಘಾಟನೆಯನ್ನು  ನೆರವೇರಿಸಿದರು.ದ.ಕ ಜಿಲ್ಲಾ  ಎಸ್ಸೆಸ್ಸೆಫ್ ಕಾರ್ಯದರ್ಶಿಯವರಾದ ರಶೀರಿ ಹಾಜಿ ವಗ್ಗ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್  ಬಂಟ್ವಾಳ ಡಿವಿಷನ್ ಪ್ರಧಾನ ಕಾರ್ಯದರ್ಶಿಯವರಾದ ಮೌಸೂಫ್ ಅಬ್ದುಲ್ಲಾ,  ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ,  ದ.ಕ. ಜಿಲ್ಲಾ  ವೆಸ್ಟ್ ಝೋನ್‌ನ ಉಪಾಧ್ಯಕ್ಷರಾದ ಅಕ್ಬರ್ ಅಲಿ ಮದನಿ, ಸಿನಾನ್ ಸಖಾಫಿ, ಪುರಸಭೆ ಉಪಾಧ್ಯಕ್ಷರಾದ ಜೆಸಿಂತಾ ಡಿಸೋಜಾ, ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಪುರಸಭಾ ನಾಮ ನಿರ್ದೇಶನ ಸದಸ್ಯರಾದ ಸಚಿನ್ ಮೆಲ್ಕಾರ್, ಆರ್. ಆರ್. ಕಮರ್ಷಿಯಲ್ ಸೆಂಟರ್‌ನ ಮಾಲಕರೂ ಮತ್ತು ಫ್ರೀಝರ್ ಘಟಕಕ್ಕೆ ನೀರಿನ ಸೌಲಭ್ಯವನ್ನು  ಒದಗಿಸಿಕೊಟ್ಟ ರಾಮ್‌ರಾಜ್ ರಾವ್, ಎನ್.ವಿ. ಡಿಜಿಟಲ್ಸ್ ಮೆಲ್ಕಾರ್‌ನ ಮಾಲಕರಾದ ನವೀನ್ ಪ್ರಕಾಶ್, ಬಿ.ಜೆ.ಪಿ ಪ್ರಮುಖರಾದ  ರೂಪೇಶ್ ಆಚಾರ್ಯ, ಪ್ರಮುಖರಾದ ಅಲ್ತಾಫ್ ಕೊಳಕೆ, ಶಬೀರ್ ಬೇಂಕ್ಯ ಉಪಸ್ಥಿತರಿದ್ದರು. ರಿಕ್ಷಾ ಚಾಲಕ ಮಾಲಕರ ಸಂಘ ಮೆಲ್ಕಾರ್ ಪಾರ್ಕ್‌ನ ಅಧ್ಯಕ್ಷರಾದ ಜಯಪ್ರಕಾಶ್‌ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮೆಲ್ಕಾರ್ ರಿಕ್ಷಾ ಪಾರ್ಕಿನಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಫ್ರೀಝರ್ ಘಟಕದ ಲೋಕಾರ್ಪಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*