






ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಪಂಗಳ ಚುನಾವಣೆ ಮಂಗಳವಾರ 7 ಗಂಟೆಗೆ ಆರಂಭಗೊಂಡು ಸಂಜೆ 5 ಗಂಟೆಗೆ ಮುಕ್ತಾಯಗೊಂಡಿದೆ. ಮಧ್ಯಾಹ್ನ 3 ಗಂಟೆವರೆಗಿನ ಮತ ಚಲಾವಣೆಯ ಲೆಕ್ಕಾಚಾರಗಳನ್ವಯ ಒಟ್ಟು 64.5 ಶೇಕಡಾ ಮತ ಚಲಾವಣೆಯಾಗಿದೆ. 87571 ಮಂದಿ ಪುರುಷರು, 91178 ಮಹಿಳೆಯರು ಹಾಗೂ 3 ಇತರರು ಮತ ಚಲಾವಣೆ ಮಾಡಿದ್ದಾರೆ. ಒಟ್ಟು 1,78,752 ಮಂದಿ ಮಧ್ಯಾಹ್ನ 3 ಗಂಟೆಯೊಳಗೆ ತಮ್ಮ ಹಕ್ಕು ಚಲಾವಣೆ ಮಾಡಿದ್ದು ವಿಶೇಷ. ಮಹಿಳೆಯರು, ವೃದ್ಧರು, ಮೊದಲ ಬಾರಿ ಮತ ಚಲಾವಣೆ ಮಾಡುವ ಉತ್ಸಾಹಿಗಳು ಬಿಸಿಲನ್ನೂ ಲೆಕ್ಕಿಸದೆ ಮತದಾನ ಮಾಡಿದರೆ, ಬೂತ್ ನ ಹೊರಗೆ ನಿಗದಿಪಡಿಸಿದ ಜಾಗಗಳಲ್ಲಿ ಅಭ್ಯರ್ಥಿಗಳು ನಿಂತುಕೊಂಡದ್ದು ಕಂಡುಬಂತು. ಮತಗಟ್ಟೆಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ ಕಾರ್ಯಕರ್ತೆಯರ ಜೊತೆಗೆ ಸ್ಯಾನಿಟೈಸರ್ ಒದಗಿಸುವ ಹಾಗೂ ಥರ್ಮಲ್ ಸ್ಕ್ಯಾನರ್ ಮೂಲಕ ತಾಪಮಾನ ಪರೀಕ್ಷೆ ಮಾಡುತ್ತಿದ್ದರೆ, ಮಾಸ್ಕ್ ಹಾಕಿ ಮತಗಟ್ಟೆಗೆ ಆಗಮಿಸಲು ಪ್ರೇರೇಪಣೆ ನೀಡಿದರು.






Be the first to comment on "ಬಂಟ್ವಾಳದಲ್ಲಿ ಚುರುಕಿನ ಮತದಾನ, 3 ಗಂಟೆ ವೇಳೆ ಶೇ.64.5 ಮಂದಿ ಹಕ್ಕು ಚಲಾವಣೆ"