





ಬಂಟ್ವಾಳ: ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಬೀರುಕೋಡಿ ಮಲ್ಯ, ಬೋಳಂತೂರು ಗ್ರಾಮ ವತಿಯಿಂದ ಡಿ.24ರಂದು ದ್ವಿತೀಯ ವರ್ಷದ ವಾರ್ಷಿಕ ಕೋಲ, 25ರಂದು ಅಗೇಲು ಸೇವೆ ನಡೆಯಲಿದೆ ಎಂದು ಅಧ್ಯಕ್ಷ ನಾರಾಯಣ ಗೌಡ ಮನೋಳಿತೋಟ, ಉಪಾಧ್ಯಕ್ಷ ಪ್ರಮೋದ್ ಪಿ.ಬೀರುಕೋಡಿ, ಕಾರ್ಯದರ್ಶಿ ಧನಂಜಯ ಗುಂಡಿಮಜಲು, ಜೊತೆ ಕಾರ್ಯದರ್ಶಿ ವಸಂತ ಪೂಜಾರಿ ಕೊರುಂಗ, ಕೋಶಾಧಿಕಾರಿ ರಘು ಕೆಂಜಿಲ ಹಾಗೂ ಸರ್ವಸದಸ್ಯರು, ಊರ ಹತ್ತು ಸಮಸ್ತರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 24ರಂದು ಬೆಳಗ್ಗೆ ಗಣಹೋಮದ ಬಳಿಕ ವಿಶೇಷ ಭಜನಾ ಸೇವೆ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ನಡೆಯಲಿದೆ. ಸಂಜೆ 7ರಿಂದ ಧರ್ಮಸ್ಥಳ ಮೇಳದವರಿಂದ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಲಿದೆ. ರಾತ್ರಿ ಮಹಾ ಅನ್ನಸಂತರ್ಪಣೆ ಇರಲಿದೆ. ಯಕ್ಷಗಾನದ ನಂತರ ಶ್ರೀ ಕೊರಗಜ್ಜ ದೈವದ ನರ್ತನ ಸೇವೆ (ಕೋಲ) ನಡೆಯಲಿದೆ. 25ರಂದು ರಾತ್ರಿ 7ರಿಂದ ಅಗೇಲು ಸೇವೆ, ರಾತ್ರಿ 8ರಿಂದ ಅನ್ನಸಂತರ್ಪಣೆ ನಡೆಯುವುದು.

Be the first to comment on "ಸ್ವಾಮಿ ಕೊರಗಜ್ಜ ಸೇವಾ ಸಮಿತಿ ವತಿಯಿಂದ ವಾರ್ಷಿಕ ಕೋಲ, ಅಗೇಲು ಸೇವೆ"