





ಬಂಟ್ವಾಳ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ಸಹಿತ ರಾಜ್ಯದ 89 ಗ್ರೇಡ್ 1 ಮತ್ತು ಗ್ರೇಡ್ 2 ತಹಸೀಲ್ದಾರ್ ಗಳ ವರ್ಗಾವಣೆಗೆ ಆದೇಶಿಸಲಾಗಿದೆ. ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಅವರನ್ನು ಉಡುಪಿ ಜಿಲ್ಲೆಯ ಕಾಪುವಿಗೆ ತಹಸೀಲ್ದಾರ್ ಆಗಿ ವರ್ಗಾಯಿಸಲಾಗಿದೆ. ಬಂಟ್ವಾಳಕ್ಕೆ ಅನಿತಾಲಕ್ಷ್ಮೀ ಅವರು ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಗ್ರಾಮ ಪಂಚಾಯತ್ ಚುನಾವಣಾ ಮಾರ್ಗಸೂಚಿಗಳನ್ವಯ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ ನೇಮಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಮತ್ತೆ ಹಿಂದಿನ ಹುದ್ದೆಗೆ ಅವರು ಮರಳಲಿದ್ದಾರೆ.

Be the first to comment on "ಪಂಚಾಯಿತಿ ಚುನಾವಣೆ ಹಿನ್ನೆಲೆ: ಬಂಟ್ವಾಳ ಸೇರಿ ರಾಜ್ಯದ 89 ತಹಸೀಲ್ದಾರ್ ವರ್ಗಾವಣೆ"