ಬಂಟ್ವಾಳ: ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ವತಿಯಿಂದ ಸೋಮವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಮಿತಿಯ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಮಾತನಾಡಿ, ಹೆಚ್ಚಿನ ಕಡೆಗಳಲ್ಲಿ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗಳಿಗೆ ಈಡೇರದೇ ಇದ್ದಲ್ಲಿ ಡಿಸಿ ಕಚೇರಿ, ಉಸ್ತುವಾರಿ ಸಚಿವರ ಕಚೇರಿಗೆ ಪಾದಯಾತ್ರೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು. ಬಂಟ್ವಾಳದಲ್ಲಿ ಡಿಸಿ ಮನ್ನಾ ಭೂಮಿಯ ಹಕ್ಕುಪತ್ರ ವಿತರಣೆ, ವಿಟ್ಲ ಪ.ಪಂ.ವ್ಯಾಪ್ತಿಯ ಅಂಬೇಡ್ಕರ್ ಭವನ ನಿರ್ಮಾಣ, ನಿವೃತ್ತ ಸೈನಿಕರಿಗೆ ಅಳತೆಯಾಗಿರುವ ಜಮೀನಿಗೆ ಹಕ್ಕುಪತ್ರ ನೀಡುವುದು ಮೊದಲಾದ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕೆದಿಲ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಮಾರಪ್ಪ ಸುವರ್ಣ, ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಗೋಪಾಲ ನೇರಳಕಟ್ಟೆ, ಸೋಮಪ್ಪ ನಾಯ್ಕ್, ಕುಶಾಲಪ್ಪ ಮೂಡಂಬೈಲು, ಜಗದೀಶ್ ಮಂಜನಾಡಿ ಉಪಸ್ಥಿತರಿದ್ದರು.
Be the first to comment on "ಬೇಡಿಕೆ ಈಡೇರದಿದ್ದರೆ ಡಿಸಿ ಕಚೇರಿಗೆ ಪಾದಯಾತ್ರೆ, ಚುನಾವಣಾ ಬಹಿಷ್ಕಾರ"