



ಬಂಟ್ವಾಳ: ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ನಾಳೆ ನಡೆಯುವ ಭಾರತ ಬಂದ್ ಗೆ ಜೆಡಿಎಸ್ ಬೆಂಬಲ ಸೂಚಿಸಿದ್ದು, ಬಂಟ್ವಾಳ ಜೆಡಿಎಸ್ ಕೂಡ ಇದನ್ನು ಬೆಂಬಲಿಸುತ್ತಿದೆ. ಈ ಕುರಿತು ಜಿಲ್ಲಾ ಅಲ್ಪಸಂಖ್ಯಾತ ಘಟಕ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ಪ್ರಕಟಣೆಯಲ್ಲಿ ತಿಳಿಸಿದ್ದು, ನಾಳೆಯ ರೈತರ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಬಂಟ್ವಾಳ ತಾಲೂಕಿನ ಎಲ್ಲ ಜೆಡಿಎಸ್ ಕಾರ್ಯಕರ್ತರು, ನಾಯಕರು ಪಾಲ್ಗೊಳ್ಳಲಿದ್ದೇವೆ ಎಂದು ಹೇಳಿದ್ಧಾರೆ. ರೈತರ ಪರ ಕಾಳಜಿಯುಳ್ಳ ಎಲ್ಲ ನಾಗರಿಕರು ಬಂದ್ ಗೆ ಬೆಂಬಲ ಸೂಚಿಸಿ, ರೈತರಿಗೆ ನ್ಯಾಯ ಒದಗಿಸಲು ಮುಂದಾಗುವಂತೆ ಅವರು ಜೆಡಿಎಸ್ ಪರವಾಗಿ ಮನವಿ ಮಾಡಿದ್ದಾರೆ.

Be the first to comment on "ಭಾರತ ಬಂದ್ ಗೆ ಬಂಟ್ವಾಳ ಜೆಡಿಎಸ್ ಬೆಂಬಲ"