ಬಂಟ್ವಾಳ

ಹುಟ್ಟೂರಲ್ಲಿ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ ಸ್ಮಾರಕ ಲೋಕಾರ್ಪಣೆ

ಬಂಟ್ವಾಳ: ಖ್ಯಾತ ಸ್ಯಾಕ್ಸೋಫೋನ್ ವಾದಕ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಅವರ ಹುಟ್ಟೂರು ಸಜೀಪದಲ್ಲಿ ಅವರ ಜನ್ಮದಿನವಾದ ಡಿ.6ರಂದು ಕುಟುಂಬದ ಸದಸ್ಯರು ಡಾ. ಕದ್ರಿ ಗೋಪಾಲನಾಥ್ ಅವರ ಪುಣ್ಯಭೂಮಿ ಸ್ಮಾರಕ ಲೋಕಾರ್ಪಣೆ ಮಾಡಿದರು.

ಅಪರಾಹ್ನ 3 ಗಂಟೆಯಿಂದ ಅವರ ಶಿಷ್ಯರಾದ ಚಂದ್ರಶೇಖರನಾಥ ಕಣಂತೂರು, ಜನಾರ್ದನನ್ ವಿ.ಆರ್. ಚೆನ್ನೈ, ಶ್ರೀಧರ್ ಸಾಗರ್, ತ್ರಿಧಾತ್, ಪ್ರಕಾಶ್ ಕೊಡ್ಯಡ್ಕ, ಪ್ರೊ.ಬಾಬುನಾರಾಯಣ್, ಗಣೇಶ್ ನಾಥ ಮತ್ತು ವೆಂಕಟಾಚಲಪತಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದರು. ಸ್ಯಾಕ್ಸೋಫೋನ್ ಜೊತೆಗೆ ಮ್ಯಾಂಡೊಲಿನ್ ವಾದನ ಮೂಲಕ ತಮ್ಮ ಗುರುಗಳನ್ನು ನೆನಪಿಸಿಕೊಂಡರು. ಕಾರ್ಯಕ್ರಮಕ್ಕೆ ಆಗಮಿಸಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಜೋಗಿ ಸುಧಾರಕ ಸಮಾಜದ ಅಧ್ಯಕ್ಷ ಕಿರಣ್ ಜೋಗಿ, ಪ್ರಮುಖರಾದ ಪಮ್ಮಿ ಕೊಡಿಯಾಲ್ ಬೈಲ್, ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ದೇವದಾಸ ಕಾಪಿಕಾಡ್, ಕುಟುಂಬಸ್ಥರಾದ ಸರೋಜಿನಿ ಗೋಪಾಲನಾಥ್, ಕದ್ರಿ ಮಣಿಕಾಂತ್, ಅದಿತಿ ಮಣಿಕಾಂತ್,  ಅಂಬಿಕಾ, ಮೋಹನ್ ಜೋಗಿ,  ಚಂದ್ರನಾಥ, ಗಣೇಶ್ ನಾಥ್ ಸಹಿತ ಶಿಷ್ಯವೃಂದ ಹಾಜರಿದ್ದರು. ರಘು ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ