
ಬಂಟ್ವಾಳ: ಮತದಾರ ಪಟ್ಟಿಯ ವೀಕ್ಷಕರಾದ ದ.ಕ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಪೊನ್ನುರಾಜ್ ಅವರು ಬಂಟ್ವಾಳ ತಾಲೂಕಿಗೆ ಶನಿವಾರ ಭೇಟಿ ನೀಡಿ ಬೂತ್ ಗಳಿಗೆ ತೆರಳಿ 204 ಮಂಗಳೂರು ಕ್ಷೇತ್ರದ ಮತಗಟ್ಟೆ ಸಂಖ್ಯೆ 90 ಮತ್ತು 91ರ ಮತದಾರರ ಪಟ್ಟಿ ವೀಕ್ಷಣೆ ನಡೆಸಿದರು.ತುಂಬೆಯಲ್ಲಿ ಈ ಮತಗಟ್ಟೆ ಇದೆ. ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಮತದಾನ ಪ್ರಕ್ರಿಯೆ ಕುರಿತು ಮಾಹಿತಿಯನ್ನು ಅವರು ನೀಡಿದರು. ಮಂಗಳೂರು ಮತ್ತು ಪುತ್ತೂರು ಸಹಾಯಕ ಕಮೀಷನರ್ ಗಳಾದ ಮದನ್ ಮೋಹನ್, ಯತೀಶ್ ಉಳ್ಳಾಲ್, ತಹಶೀಲ್ದಾರ್ ರಶ್ಮಿ ಎಸ್.ಆರ್, ಆರ್.ಐ.ಗಳಾದ ರಾಮ ಕಾಟಿಪಳ್ಳ, ತುಂಬೆ ಗ್ರಾಮಲೆಕ್ಕಿಗ ಪ್ರಶಾಂತ್, ಬೂತ್ ಮಟ್ಟದ ಅಧಿಕಾರಿಗಳಾದ ವಿಶಾಲಾಕ್ಷಿ ಮತ್ತು ಮಲ್ಲಿಕಾ, ಚುನಾವಣಾ ಶಾಖೆಯ ರಾಜ್ ಕುಮಾರ್ ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ತಾಲೂಕಿಗೆ ವಿ.ಪೊನ್ನುರಾಜ್ ಭೇಟಿ, ಮತದಾರರ ಪಟ್ಟಿ ಪರಿಶೀಲನೆ"