
ಇದು ರಸ್ತೆ ರಿಪೇರಿ ಕಾರ್ಯ ನಡೆದಿದೆ ಎನ್ನಲಾದ ರಾಷ್ಟ್ರೀಯ ಹೆದ್ದಾರಿ 75ರ ನರಹರಿ ಪರ್ವತ ಬಳಿಯ ಮತ್ತು ಮೇಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣಾ ಸಮೀಪದ ದೃಶ್ಯ. ಮೇಲ್ಕಾರ್ ಟ್ರಾಫಿಕ್ ಠಾಣೆ ಪಕ್ಕ ರಸ್ತೆಗೆ ಡಾಂಬರು ಹಾಕಿದ ಕುರುಹುಗಳು ಇಲ್ಲ. ನರಹರಿ ಪರ್ವತ ಬಳಿಯಲ್ಲಿ ಡಾಂಬರು ಹಾಕಿದಂತೆ ಕಾಣಿಸುತ್ತಿದ್ದರೂ ಯಾವುದೇ ಕ್ಷಣದಲ್ಲೂ ಕಿತ್ತುಹೋಗಬಹುದು ಎಂದು ಹೇಳಬಹುದಾದಂಥ ಪರಿಸ್ಥಿತಿ ಇದೆ ಎನ್ನುತ್ತಾರೆ ಸಾರ್ವಜನಿಕರು. ಗಾಯಕ್ಕೆ ಪ್ಲಾಸ್ಟರ್ ಹಾಕಿದರೆ ಗಾಯ ಕಾಣಿಸುವುದಿಲ್ಲ. ಆದರೆ ಅದನ್ನು ಕಿತ್ತರೆ, ಗಾಯವೂ ಮತ್ತಷ್ಟು ಭೀಕರವಾಗಿ ಕಾಣಿಸುತ್ತದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ಏನೋ ಫಳಫಳ ಹೊಳೆಯುತ್ತಿದೆ. ಪಾಣೆಮಂಗಳೂರು ಕಲ್ಲುರ್ಟಿ ಸನ್ನಿಧಿಯ ಪಕ್ಕ ಒಂದು ಪಾರ್ಶ್ವ ಡಾಂಬರು ಕಾಣಿಸುತ್ತಿದೆ. ಮೇಲ್ಕಾರ್ ದಾಟಿದರೆ…. ಹೋಗಿಯೇ ನೋಡಬೇಕು!!
Be the first to comment on "ಹೆದ್ದಾರಿ ಸಂಚಾರ ಮತ್ತಷ್ಟು ಅಪಾಯಕಾರಿ"