ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ಸಮೀಪದ ನೇರಳಕಟ್ಟೆ ಪರ್ಲೊಟ್ಟು ಎಂಬಲ್ಲಿ ಮನೆಯೊಂದರಲ್ಲಿ ಚಿನ್ನ, ನಗದು ಕಳವಾಗಿದ್ದಾಗಿ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ನೆಟ್ಲ ಮುಡ್ನೂರು ಗ್ರಾಮದ ನಿವಾಸಿ ಸಲ್ಮಾನ್ ಎಂಬವರು ಈ ಕುರಿತು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ತನ್ನ ತಂದೆ-ತಾಯಿಯೊಂದಿಗೆ ಗಡಿಯಾರದಲ್ಲಿನ ಸಂಬಂದಿಕರ ಮನೆಯ ಕಾರ್ಯಕ್ರಮವೊಂದಕ್ಕೆ ಹೋಗಿ ವಾಪಾಸ್ಸು ಮನೆಗೆ ಬಂದು ರಾತ್ರಿ 10 ಗಂಟೆಗೆ ಮನೆಯ ಸದಸ್ಯರೆಲ್ಲರೂ ಮಲಗಿದ್ದು, ಮಂಗಳವಾರ ಮುಂಜಾನೆತಾಯಿಯವರು ಎದ್ದು ನೋಡಲಾಗಿ ಕಪಾರ್ಟ್‌ನಲ್ಲಿದ್ದ ಬಂಗಾರ ಇಡುವ ಖಾಲಿ ಬಾಕ್ಸ್ ಬಿದ್ದಿರುವುದನ್ನು ಕಂಡು ಬಂದಿರುತ್ತದೆ. ಮನೆಯ ಸದಸ್ಯರೆಲ್ಲರೂ ಪರಿಶೀಲಿಸಲಾಗಿ ಸುಮಾರು 200 ಗ್ರಾಂ ಚಿನ್ನದ ಆಭರಣಗಳು, 40,000 ನಗದು ಹಾಗೂ ಒಂದು ಮೊಬೈಲ್ ಫೋನ್ ಕಳ್ಳತನವಾಗಿರುವುದು ಕಂಡು ಬಂದಿದ್ದು, ಕಳ್ಳತನವಾದ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ ರೂಪಾಯಿ 6,50,000 ಆಗಬಹುದು ಎಂದು ಅಂದಾಜಿಸಲಾಗಿದೆ.. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ: 457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಘಟನಾ ಸ್ಥಳಕ್ಕೆ ವಿಟ್ಲ ಎಸೈ ಎಸ್.ಐ ವಿನೋದ್ ರೆಡ್ಡಿ ಮತ್ತು ತಂಡ ಆಗಮಿಸಿ ಪರಿಶೀಲನೆ ನಡೆಸಿದರು.ಶ್ವಾನದಳ ಹಾಗೂ ಬೆರಳಚ್ಚು ತಜ್ಞ ರನ್ನೂ ಕರೆಸಿ ಪರಿಶೀಲನೆ ನಡೆಸಲಾಗಿದೆ.
Be the first to comment on "ಮನೆಯವರು ಮಲಗಿದ್ದಾಗ ಚಿನ್ನಾಭರಣ ಕಳವು: ವಿಟ್ಲ ಠಾಣೆಯಲ್ಲಿ ಪ್ರಕರಣ"