ಶಂಭೂರು ಗ್ರಾಮದಲ್ಲಿ 71 ಲಕ್ಷ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಬಂಟ್ವಾಳ: ಶಂಭೂರು ಗ್ರಾಮದಲ್ಲಿ ಸುಮಾರು 71 ಲಕ್ಷ ರೂ ವೆಚ್ಚದ ವಿವಿಧ ಕಾಮಗಾರಿಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೋಮವಾರ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿದರು. 20 ಲಕ್ಷ ವೆಚ್ಚದಲ್ಲಿ ಶಂಭೂರು ಕೂಡಿಬೆಟ್ಟು ರಸ್ತೆ, 5 ಲಕ್ಷ ವೆಚ್ಚದಲ್ಲಿ  ಮಂಜನಕೋಡಿ ರಸ್ತೆ , 10 ,ಲಕ್ಷ ವೆಚ್ಚದಲ್ಲಿ ಕುಂದಾಯಗೋಳಿ ಮಂಜಿಪಾಲ್ ಜೋಗಿಬೆಟ್ಟು ರಸ್ತೆ , 20 ಲಕ್ಷ ವೆಚ್ಚದಲ್ಲಿ ಬೈಪಾಡಿ ಶಿರ್ಡಿ ರಸ್ತೆ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು.  16 ಲಕ್ಷ ವೆಚ್ಚದಲ್ಲಿ ಶಂಭೂರು ಶೇಡಿ ಗುರಿ ನೂತನ ಅಂಗನವಾಡಿ ಕಟ್ಟಡ ಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಶಂಭೂರು ಇರಂತಬೆಟ್ಟು ಸುಧೆಕಾರ್ ರಸ್ತೆ ಹಾಗೂ ಶಂಭೂರು ಬರ್ಕೆ ಕಕ್ಕೆಮಜಲು ಮೂಲಕ ಕಲ್ಲಡ್ಕ ಸಂಪರ್ಕದ  ರಸ್ತೆಯನ್ನು ವೀಕ್ಷಿಸಿದ ಶಾಸಕರು ಈಗಾಗಲೇ ಈ ರಸ್ತೆಯ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದ್ದು  ಶೀಘ್ರವಾಗಿ ಮಂಜೂರಾತಿ ಮಾಡುವ ಭರವಸೆ ನೀಡಿದರು. ಶಂಭೂರಿನ ಬೈಪಾಡಿ ದಕ್ಷಿಣ ಶಿರ್ಡಿ ಮಂದಿರದಕ್ಕೆ ಬೇಟಿ ನೀಡಿದ ವೇಳೆ ಶಾಸಕರನ್ನು ಸನ್ಮಾನಿಸಲಾಯಿತು.

ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಹಿಂದುಳಿದ ಮೋರ್ಚಾದ ಅಧ್ಯಕ್ಷ ಆನಂದ ಶಂಭೂರು,  ಗ್ರಾ‌.ಪಂ.ಮಾಜಿ ಅಧ್ಯಕ್ಷ ಯಶೋಧರ ಕರ್ಬೆಟ್ಟು,ಶಂಭೂರು ಬೂತ್ ಸಮಿತಿ ಅಧ್ಯಕ್ಷರುಗಳಾದ ಯೋಗೀಶ್ , ಸಂತೋಷ್, ಕಾರ್ಯದರ್ಶಿಗಳಾದ ಕೇಶವ, ಪ್ರಕಾಶ್,  ಕ್ಷೇತ್ರ ಸಮಿತಿ ಸದಸ್ಯ ಜಿನರಾಜ್ ಕೋಟ್ಯಾನ್, ಪ್ರಮುಖರಾದ ದಿವಾಕರ ಶಂಭೂರು, ಉದಯರಾಜ, ಜಯರಾಜ, ಬೋಜರಾಜ್, ಜಿನ್ನಪ್ಪ, ಶಿರ್ಡಿ ಸಾಯಿ ಮಂದಿರದ ಅಧ್ಯಕ್ಷ ಸೂರಜ್ ಕುಮಾರ್ ಬೋಳಾರ ಮತ್ತಿತರ ರು ಉಪಸ್ಥಿತರಿದ್ದರು.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಶಂಭೂರು ಗ್ರಾಮದಲ್ಲಿ 71 ಲಕ್ಷ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*