ಬಂಟ್ವಾಳ : ಬಿ.ಸಿ.ರೋಡಿನ ರಾಜರಾಜೇಶ್ವರಿ ಕಾಂಪ್ಲೆಕ್ಸ್‌ನಲ್ಲಿರುವ ಯುನಿಕ್ ಎಜುಕೇರ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಅಧ್ಯಯನ ತಂತ್ರಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ತಯಾರಿ ಕಾರ್ಯಕ್ರಮ ನಡೆಯಿತು.
ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಕೃಷ್ಣಶಾಮ್ ಉದ್ಘಾಟಿಸಿ, ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಉಪನ್ಯಾಸಕ ಚೇತನ್ ಮುಂಡಾಜೆ, ವರ್ತಮಾನ ಪತ್ರಿಕೆಗಳನ್ನು ಓದುವ ಮೂಲಕ ನಾವು ಇಂದಿನ ವಿಚಾರಗಳನ್ನು ತಿಳಿದುಕೊಳ್ಳಬೇಕು. ಆ ಮೂಲಕವಾಗಿ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.ಯುನಿಕ್ ಎಜುಕೇರ್‌ನ ಲಕ್ಷ್ಮಣ ಅಗ್ರಬೈಲ್ ಸ್ವಾಗತಿಸಿ, ಕವಿತಾ ಯಾದವ್ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕಿ ಭಾರತಿ ವಸಂತ ಕುಮಾರ್ ಅಣ್ಣಳಿಕೆ ನಿರೂಪಿಸಿದರು. ವೈಷ್ಣವಿ ಮತ್ತು ಧನ್ಯಾ ಪ್ರಾರ್ಥಿಸಿದರು. ವಕೀಲರಾದ ಯಶೋಧ, ಪ್ರಮುಖರಾದ ಯಾದವ ಅಗ್ರಬೈಲ್, ದೇವದಾಸ್, ಡಾ. ಬಾಲಕೃಷ್ಣ ಕುಮಾರ್ ಸಹಕರಿಸಿದರು.
Be the first to comment on "ವಿದ್ಯಾರ್ಥಿಗಳಿಗೆ ಅಧ್ಯಯನ ತಂತ್ರಗಳು, ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಕಾರ್ಯಾಗಾರ"