ಬಂಟ್ವಾಳ: ಪಾಣೆಮಂಗಳೂರು ಸೇತುವೆಯ ಬಳಿ ಬ್ಯಾಗನ್ನಿಟ್ಟು ಯುವಕನೋರ್ವ ನದಿಗೆ ಹಾರಿದ ಘಟನೆ ಭಾನುವಾರ ನಡೆದಿದ್ದು, ಹುಡುಕಾಟದ ನಂತರ ಸೋಮವಾರ ಸಂಜೆ ಪಾಣೆಮಂಗಳೂರು ಹೊಸ ಸೇತುವೆಯ ತಳಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.
ಪುತ್ತೂರು ತಾಲೂಕಿನ ಬಲ್ನಾಡು ಕಾಂತಿಲ ನಿವಾಸಿ ಸುಚೇತನ್ (27) ಭಾನುವಾರ ಮಂಗಳೂರಿನ ಪಿಜಿಯಿಂದ ಬಂದು ಬೆಳಗ್ಗೆ ಪಾಣೆಮಂಗಳೂರು ಹೊಸ ಸೇತುವೆಯ ಬಳಿ ತನ್ನ ಬ್ಯಾಗ್ ಇರಿಸಿ ನದಿಗೆ ಹಾರಿದ್ದು, ಯಾರೋ ಅದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಗಿನಲ್ಲಿ ಸಿಕ್ಕ ಆಧಾರ್ ಕಾರ್ಡ್, ವೋಟರ್ ಐಡಿ ಆಧಾರದಲ್ಲಿ ಇದೇ ಯುವಕ ನದಿಗೆ ಹಾರಿದ್ದಾನೆ ಎಂದು ಸಂಶಯಿಸಿ ಮನೆಗೆ ಮಾಹಿತಿ ನೀಡಲಾಗಿತ್ತು. ಬಳಿಕ ರಾತ್ರಿವರೆಗೂ ಬಂಟ್ವಾಳ ಅಗ್ನಿಶಾಮಕ ದಳ, ಸ್ಥಳೀಯ ಈಜುಗಾರರು ಬೋಟಿನ ಮೂಲಕ ಸಂಜೆಯವರೆಗೂ ಹುಡುಕಾಡಿದರೂ, ಯುವಕನ ಶವ ಪತ್ತೆಯಾಗಿರಲಿಲ್ಲ. ಸೋಮವಾರ ಕೂಡ ಹುಡುಕಾಟ ಮುಂದುವರಿಸಿದ್ದು, ಯುವಕನ ಮೃತದೇಹ ಪಾಣೆಮಂಗಳೂರು ಹೊಸ ಸೇತುವೆ ತಳಭಾಗದಲ್ಲಿ ಸಿಕ್ಕಿದ್ದು ಬಂಟ್ವಾಳ ಅಗ್ನಿ ಶಾಮಕ ದಳದವರು ಬೋಟಿನಲ್ಲಿ ಹುಡುಕಾಡುವಾಗ ಶವ ಪತ್ತೆಯಾಗಿದೆ.
Be the first to comment on "ನದಿಗೆ ಹಾರಿದ ಯುವಕನ ಶವ ಪತ್ತೆ"