ಬಂಟ್ವಾಳ: ಕೊರೊನಾದಲ್ಲಿ ಹಣ ಬಂದಿದೆ, ಹಣ ಸಿಗಬೇಕಾದರೆ ನಾವು ಹಣ ಕಟ್ಟಬೇಕು ಎಂದು ಹೇಳಿ ಬಡ ಮಹಿಳೆಯೋರ್ವರ ಬಂಗಾರವನ್ನೇ ತೆಗೆದುಕೊಂಡು ಹೋದ ಘಟನೆ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಬಿಲ್ ಪಾವತಿಸಿ ವಾಪಸ್ ಬರುತ್ತಿದ್ದ ಜಯಂತಿ ಅವರಲ್ಲಿ ಅಪರಿಚಿತ ವ್ಯಕ್ತಿ, ತಾನು ಶೀನಪ್ಪ ಅವರ ಮಗ ಸಂತೋಷ್ ಎಂದು ಪರಿಚಯ ಮಾಡಿದ್ದಾನೆ. ಬಳಿಕ ಆತ ನಿಮಗೆ ಕೊರೋನದಲ್ಲಿ ಒಂದೂವರೆ ಲಕ್ಷ ರೂಪಾಯಿ ಹಣ ಬಂದಿದೆ ಎಂದು ನಂಬಿಸಿದ್ದಾನೆ ಎನ್ನಲಾಗಿದೆ.
ಕೊರೋನದ ಹಣ ಪಡೆಯಲು ಕನಿಷ್ಠ ಹತ್ತು ಸಾವಿರ ರೂಪಾಯಿ ಪಾವತಿಸಬೇಕು ಎಂದು ಹೇಳಿದ್ದಲ್ಲದೆ ಅರ್ಜಿ ತುಂಬಿಸಲೆಂದು ಮಹಿಳೆಯನ್ನು ಮಿನಿ ವಿಧಾನಸೌಧಕ್ಕೆ ಕರೆದುಕೊಂಡು ಹೋಗಿ ಮತ್ತೆ ಹಣ ಕೇಳಿದ್ದು ಈ ವೇಳೆ ಮಹಿಳೆ ನನ್ನಲ್ಲಿ ಇಲ್ಲ. ಮಗನಿಗೆ ಕರೆ ಮಾಡಿ ಹಣ ಇದೆಯಾ ಕೇಳುತ್ತೇನೆ ಎಂದಿದ್ದಾರೆ. ಈ ವೇಳೆ ಆತ, ಮಗನಿಗೆ ನಾನು ಆಗಲೇ ಕರೆ ಮಾಡಿ ಕೇಳಿದ್ದು ಆತ ಇಲ್ಲ ಎಂದಿದ್ದಾನೆ. ತಾಯಿಯಲ್ಲೂ ಹಣ ಇಲ್ಲದಿದ್ದರೆ ಅವರಲ್ಲಿ ಚಿನ್ನ ಕೇಳಿ ತೆಗೆಯುವಂತೆ ಹೇಳಿದ್ದಾನೆ ಎಂದು ಹೇಳಿ ಅಪರಿಚಿತ ಮಹಿಳೆಯನ್ನು ನಂಬಿಸಿದ್ದಾನೆ. ಅಪರಿಚಿತನ ಮಾತನ್ನು ನಂಬಿದ ಮಹಿಳೆ ಕಿವಿಯಲ್ಲಿದ್ದ ಬೆಂಡೋಲೆ ತೆಗೆದು ಕೊಟ್ಟಿದ್ದಾರೆ. ಚಿನ್ನ ಪಡೆದ ವ್ಯಕ್ತಿ ನೀವು ಇಲ್ಲೇ ಕುಳಿತುಕೊಳ್ಳಿ ಎಂದು ಹೇಳಿ ಹೋದವನು ಅಲ್ಲಿಂದ ಪರಾರಿಯಾಗಿದ್ದಾನೆ. ಕೊನೆಗೆ ಮಹಿಳೆ ಮಿನಿವಿಧಾನ ಸೌಧದ ಕಚೇರಿಯ ಮಹಿಳಾ ಸಿಬ್ಬಂದಿಯ ಮೂಲಕ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ತಾನು ಮೋಸ ಹೋಗಿರುವುದು ಅರಿವಾಗಿದೆ.
Be the first to comment on "ಕೊರೊನಾ ಹಣ ಬಂದಿದೆ ಎಂದು ಮಹಿಳೆಯ ನಂಬಿಸಿ ಚಿನ್ನಾಭರಣ ಕದ್ದೊಯ್ದ ಆಗಂತುಕ"