ಬಂಟ್ವಾಳ: ಕರ್ನಾಟಕ-ಕೇರಳ ರಾಜ್ಯಗಳ ಗಡಿ ಪ್ರದೇಶದ ಇರಾ ಗ್ರಾಮದ ಬಾಳೆಪುಣಿ ಕುದುಂಬುವಳಚ್ಚಿಲ್ ಎಂಬಲ್ಲಿ ತಮ್ಮ ಶಿಫಾರಸಿನ ಮೂಲಕ ಪಿಡಬ್ಲ್ಯುಡಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಿದ 15 ಲಕ್ಷ ಅಂದಾಜು ಮೊತ್ತದ ಶಾಲಾ ಸೇತು ಕಿರುಸೇತುವೆ ಕಾಮಗಾರಿಯನ್ನು ಶಾಸಕರಾದ ಯು ಟಿ ಖಾದರ್ ಜನಪ್ರತಿನಿಧಿಗಳ ಸಮ್ಮುಖ ಪರಿಶೀಲಿಸಿದರು.
ಸ್ಥಳೀಯ ಗ್ರಾಮಸ್ಥರು ಈ ಸೇತುವೆಯ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಿದಾಗ ಶಾಸಕರು ಮುಂದಿನ ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದರು. ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ,ವರ್ಕಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ಮಜೀದ್ ಪಿ ಬಿ,ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಎಂ ಬಿ ಉಮ್ಮರ್,ಮೊಯ್ದುಕುಂಞ ,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹಸೈನಾರ್, ಸ್ಥಳೀಯ ಗಣ್ಯರಾದ ಸತ್ತಾರ್ ಬಾಳೆಪುಣಿ,ಮೊಹಮ್ಮದ್ ಹಾಜಿ ಇನ್ನಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
Be the first to comment on "ಇರಾ ಬಾಳೆಪುಣಿ ಶಾಲಾ ಸೇತು ಕಾಮಗಾರಿ ಪರಿಶೀಲಿಸಿದ ಶಾಸಕ ಯು ಟಿ ಖಾದರ್"