ಬಂಟ್ವಾಳದಂತ ಸಣ್ಣ ಪ್ರದೇಶದಲ್ಲಿ ಎಳೆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಚಿಣ್ಣರಲೋಕದ ಸಂಚಾಲಕ ಮೋಹನ್ ದಾಸ್ ಕೊಟ್ಟಾರಿ ಅವರಿಂದ ನಡೆಯುತ್ತಿರುವುದು ಅಭಿನಂದನೀಯವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಂಟ್ವಾಳ ತಾಲೂಕಿನ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಐಸಿರಿ ಕರಾವಳಿಯ ಸೊಬಗು ವೀಡಿಯೋ ಅಲ್ಬಂನ ಹಾಡುಗಳ ಟೀಸರ್ ಚಿತ್ರತುಣುಕು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಈ ಸಮಾರಂಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷ,ನ್ಯಾಯವಾದಿ ಜಯರಾಮ ರೈ,ಗೌರವ ಸಲಹೆಗಾರ,ಯಕ್ಷಗಾನ ಕಲಾವಿದ ಸರಪಾಡಿ ಆಶೋಕ್ ಶೆಟ್ಟಿ , ರಂಗಭೂಮಿ ಕಲಾವಿದ ದಯಾನಂದರೈ ಬೆಟ್ಟಂಪಾಡಿ, ಬಾಲಚಿತ್ರನಟಿ ದೀಕ್ಷಾ ಡಿ. ರೈ,ಸಂಗೀತ ನಿರ್ದೇಶಕ ಭಾಸ್ಕರ್ ರಾವ್ ಬಿ.ಸಿ.ರೋಡ್,ಉಪನ್ಯಾಸಕ ತೀರ್ಥಪ್ರಸಾದ್ ಭಾಗವಹಿಸಿದ್ದರು. ಇದೇ ವೇಳೆ ಕಂಠದಾನ ಕಲಾವಿದ ,ನಿರ್ದೇಶಕ ರಮೇಶ್ ಶಿವಪುರ ಮುಂಬೈ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ನ ಸಂಚಾಲಕ ಮೋಹನದಾಸ್ ಕೊಟ್ಟಾರಿ ಸ್ವಾಗತಿಸಿದರು. ಸೌಮ್ಯ ವಂದಿಸಿದರು. ಹಿರಿಯ ಕಲಾವಿದ ಎಚ್.ಕೆ.ನಯನಾಡು ಕಾರ್ಯ ಕ್ರಮ ನಿರೂಪಿಸಿದರು.
Be the first to comment on "ಎಳೆಯ ಪ್ರತಿಭೆ ಗುರುತಿಸುವ ಚಿಣ್ಣರ ಲೋಕ ಸಾಧನೆ ಅಭಿನಂದನೀಯ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್"