ಬಿ.ಸಿ.ರೋಡ್: ಬೋಳಿಯಾರು ಸಮೀಪದ ರಂತಡ್ಕ ಬದ್ರಿಯ ಜುಮಾ ಮಸೀದಿ ಇದರ ನವೀಕೃತ ಮಸೀದಿ ಉದ್ಘಾಟನೆ ಹಾಗೂ ಖಾಝಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹಮದ್ ಮುಸ್ಲಿಯಾರ್ ನವೀಕೃತ ಮಸೀದಿಯ ಉದ್ಘಾಟನೆ ಹಾಗೂ ವಕ್ಫ್ ನೆರವೇರಿಸಿದರು. ರಂತಡ್ಕ ಬಿ.ಜೆ.ಎಂ.ಅದ್ಯಕ್ಷ ಎಸ್.ಅಬ್ದುಲ್ ಖಾದರ್ ಅದ್ಯಕ್ಷತೆ ವಹಿಸಿದ್ದರು. ರಂತಡ್ಕ ಖತೀಬ್ ಕೆ.ಬಿ.ಅಬ್ದುಲ್ ಖಾದರ್ ದಾರಿಮಿ ಪ್ರಸ್ಥಾವನೆಗೈದರು, ನಂದಾವರ ಖತೀಬ್ ಸಿದ್ದೀಕ್ ದಾರಿಮಿ ಖಾಝಿ ಸ್ವೀಕಾರದ ಅಗತ್ಯ ಮತ್ತು ಮಹತ್ವದ ಬಗ್ಗೆ ವಿವರಿಸಿದರು. ಇದೇ ವೇಳೆ ಕೆ.ಪಿ.ಇರ್ಶಾದ್ ದಾರಿಮಿ ಮಿತ್ತಬೈಲು ಅವರು ಶೈಖುನಾ ತ್ವಾಖಾ ಅಹಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರನ್ನು ಬದ್ರಿಯ ಜುಮಾ ಮಸೀದಿ ರಂತಡ್ಡ ಇದರ ಖಾಝಿಯನ್ನಾಗಿ ಜಮಾಅತಿನ ಸರ್ವರ ಪರವಾಗಿ ಘೋಷಣೆ ಮಾಡಿದರು. ಹನೀಫ್ ಹಾಜಿ ಮಂಗಳೂರು, ಅಬ್ದುಲ್ ರಝಾಕ್ ಹಾಜಿ ಬಿ.ಸಿ.ರೋಡ್, ಹಾಜಿ ಪಕೀರಬ್ಬ ಮಾಸ್ಟರ್, ಸಮದ್ ಹಾಜಿ ಮಂಗಳೂರು, ಹೈದ್ರೋಸ್ ಕುದ್ರೋಳಿ, ಮಜೀದ್ ಪೈಝಿ ನಂದಾವರ, ಕೋಟೆಕ್ಕಣಿ ಖತೀಬ್ ಅನ್ಸಾರುದ್ದೀನ್ ಪೈಝಿ, ರಂತಡ್ಕ ಸದರ್ ಮುಅಲ್ಲಿಂ ಮುಹಮ್ಮದ್ ನವಾಝ್ ಪೈಝಿ, ರಂತಡ್ಕ ಬಿ.ಜೆ.ಎಂ. ಉಪಾದ್ಯಕ್ಷ ಆಸಿಫ್, ಕೋಶಾಧಿಕಾರಿ ಹಸನಬ್ಬ ಹಾಜಿ, ಜೊತೆ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್, ನುಸ್ರತುಲ್ ಮಸಾಕೀನ್ ಕಮಿಟಿ ಅದ್ಯಕ್ಷ ಮುಹಮ್ಮದ್ ಮಸೂದ್, ಎಸ್.ವೈ.ಎಸ್.ಅದ್ಯಕ್ಷ ಎಂ.ಆರ್.ಮುಹಮ್ಮದ್, ಎಸ್ಕೆಎಸ್ಸೆಸ್ಸೆಫ್ ಅದ್ಯಕ್ಷ ಇಸಾಕ್ ಮೊದಲಾದವರು ಭಾಗವಹಿಸಿದ್ದರು. ಮಸೀದಿ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಇಬ್ರಾಹಿಂ ಸ್ವಾಗತಿಸಿ, ವಂದಿಸಿದರು. ಮುಝಮ್ಮಿಲ್ ಕಿರಾಅತ್ ಪಠಿಸಿದರು.
Be the first to comment on "ರಂತಡ್ಕ: ನವೀಕೃತ ಮಸೀದಿ ಉದ್ಘಾಟನೆ ಹಾಗೂ ಖಾಝಿ ಸ್ವೀಕಾರ"