ಬಂಟ್ವಾಳ: ಬಂಟ್ವಾಳ ಜೈನ್‌ಮಿಲನ್ ಹಾಗೂ ಯುವ ಜೈನ್‌ಮಿಲನ್ ವತಿಯಿಂದ ಮಾರ್ನಮಿದ ಪುದ್ದರ್ (ಸಾಮೂಹಿಕ ಹೊಸ ಅಕ್ಕಿ ಊಟ) ಹಾಗೂ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.
ಮುಖ್ಯ ಅತಿಥಿ ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ನಾವು ವಿಶಾಲ ಮನೋಭಾವ ಕೆಲಸ ಮಾಡಿದಾಗ ಸಂಘಟನೆಗಳು ವಿಶಾಲವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಜೈನ್ ಮಿಲನ್‌ಗಳು ಸಂಘಟನೆಯ ದೃಷ್ಟಿಯಿಂದ ತಿಂಗಳಿಗೊಂದು ಕಾರ್ಯಕ್ರಮ ಆಯೋಜಿಸುವುದು ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಲು ಸಂಘಟನೆ ತಯಾರಿ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಡಾ. ಸುದೀಪ್‌ಕುಮಾರ್ ಸಿದ್ಧಕಟ್ಟೆ ಮಾತನಾಡಿ, ನವರಾತ್ರಿಯ ಶುಭ ಸಂದರ್ಭದಲ್ಲಿ ಈ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ವೇಳೆ ತಾಳಮದ್ದಳೆಯನ್ನು ಆಯೋಜಿಸುವ ಮೂಲಕ ಪುರಾಣದ ಕತೆಯನ್ನು ತಿಳಿದುಕೊಳ್ಳುವುದಕ್ಕೆ ನೆರವಾಗಿದೆ ಎಂದರು.
ಭಾಷಾ ವಿದ್ವಾಂಜ ಮುನಿರಾಜ ರೆಂಜಾಳ, ಬಂಟ್ವಾಳ ಜೈನ್ ಮಿಲನ್ ಮಾಜಿ ಕಾರ್ಯದರ್ಶಿ ಉದಯಕುಮಾರ್ ಜೈನ್ ಮಧ್ವ, ಪುತ್ತೂರು ಜೈನ್ ಮಿಲನ್ ಕಾರ್ಯದರ್ಶಿ ಸತೀಶ್‌ಕುಮಾರ್ ಪಡಿವಾಳ್, ಭರತ್‌ರಾಜ್ ಜೈನ್ ವೇಣೂರು, ಡಾ. ಪ್ರಭಾತ್‌ಕುಮಾರ್ ಜೈನ್, ಸುಧಾಕರ್ ಜೈನ್, ಕಾರ್ಯದರ್ಶಿ ಸನ್ಮತಿ ಜೈನ್ ವೇದಿಕೆಯಲ್ಲಿದ್ದರು. ಹವ್ಯಾಸಿ ಕಲಾವಿದ ಡಾ. ಶ್ರುತಕೀರ್ತಿ ಜೈನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಸಿಕೊಟ್ಟ ಜೈನ ಸಮುದಾಯ ಕಲಾವಿದರು ಹಾಗೂ ಯುವ ಪ್ರತಿಭೆ ನಿಶಿತ್‌ಕುಮಾರ್ ಇಂದ್ರ ಅವರನ್ನು ಗೌರವಿಸಲಾಯಿತು. ಬಂಟ್ವಾಳ ಜೈನ್ ಮಿಲನ್ ಮಾಜಿ ಅಧ್ಯಕ್ಷ ಆದಿರಾಜ ಜೈನ್ ಸ್ವಾಗತಿಸಿದರು. ಮಂಗಳೂರು ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ವಂದಿಸಿದರು. ಕಾರ್ಯಕ್ರಮದಲ್ಲಿ ಸರಕಾರಿ ಯೋಜನೆಗಳ ನೋಂದಣಿ ಶಿಬಿರ ನಡೆಯಿತು.
Be the first to comment on "ಬಂಟ್ವಾಳದ ಜೈನ್ ಮಿಲನ್ ನಿಂದ ಮಾರ್ನಮಿದ ಪುದ್ದರ್"