ಬಂಟ್ವಾಳ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317 ಡಿ, ಪ್ರಾಂತ್ಯ 2 ರ ಪ್ರಾಂತೀಯ ಸಮ್ಮೇಳನ ಪುನರ್ ಜನ್ಮ ಕಾರ್ಯಕ್ರಮದ ಮನವಿ ಪತ್ರ ಬಿಡುಗಡೆ ಮತ್ತು ಸೇವಾ ಕಾರ್ಯಕ್ರಮವಾದ ಶೈತ್ಯಾಗಾರ ನಿರ್ಮಾಣಕ್ಕೆ ಮುಂಗಡ ಮೊಬಲಗು ಪಾವತಿ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮನವಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಮೊಡಂಕಾಪು ಚರ್ಚಿನ ಧರ್ಮಗುರು ಅತಿವಂದನೀಯ ವಲೇರಿಯನ್ ಡಿಸೋಜ, ಲಯನ್ಸ್ ಕ್ಲಬ್ ಸಮಾಜಮುಖಿ ಸೇವಾ ಚಟುವಟಿಕೆಗಳಿಂದಲೇ ಗುರುತಿಸಿಕೊಂಡಿದೆ. ಇದೀಗ ಪ್ರಾಂತೀಯ ಸಮ್ಮೇಳನದ ಜೊತೆಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಬಡಜನರಿಗಾಗಿ ಉಚಿತ ಶೈತ್ಯಾಗಾರ ಅಳವಡಿಸಲು ಮುಂದಾಗಿರುವುದು ಸ್ತುತ್ಯರ್ಹ, ಈ ಪರಿಕಲ್ಪನೆಯನ್ನು ಒದಗಿಸಿದ ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ ಅವರ ಕಾಳಜಿ ಶ್ಲಾಘನಾರ್ಹ ಎಂದು ಹೇಳಿದರು. ಇದೇ ವೇಳೆ ಶೈತ್ಯಾಗಾರ ನಿರ್ಮಾಣಕ್ಕೆ 1.5 ಲಕ್ಷ ರೂಗಳ ಮೊತ್ತದ ಮುಂಗಡ ಚೆಕ್ ಹಸ್ತಾಂತರ ನಡೆಯಿತು.
ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ ಮಾತನಾಡಿ, ಶೈತ್ಯಾಗಾರದ ಪರಿಕಲ್ಪನೆಗೆ ಲಯನ್ಸ್ ಕ್ಲಬ್ ಸದಸ್ಯರು ಉತ್ತಮವಾಗಿ ಸ್ಪಂದಿಸಿರುವುದು ಸಂತಸದ ವಿಚಾರ ಎಂದರು. ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಕೃಷ್ಣ ಶ್ಯಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತೀಯ ಸಮ್ಮೇಳನಾಧ್ಯಕ್ಷ ಅಧ್ಯಕ್ಷ ಸತೀಶ್ ಕುಡ್ವ ಕಾರ್ಯಕ್ರಮ ಉದ್ಘಾಟಿಸಿದರು.
ಲಯನ್ಸ್ ಉಪರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ಮಾಜಿ ರಾಜ್ಯಪಾಲ ದೇವದಾಸ ಭಂಡಾರಿ ಶುಭ ಹಾರೈಸಿದರು. ಇದೇ ವೇಳೆ ಲಯನ್ಸ್ ಕ್ಲಬ್ ಗೆ ಕೊಡುಗೆ ನೀಡಿದ ದಿವಂಗತ ಅನಂತಕೃಷ್ಣ ಮತ್ತು ಎಪ್ರಿಯಂ ಸಿಕ್ವೇರಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪ್ರಮುಖರಾದ ಡಾ.ವೇಣುಗೋಪಾಲ್, ಜಗದೀಶ ಯಡಪಡಿತ್ತಾಯ, ವಾಲ್ಟರ್ ಡಿಸೋಜ, ಶ್ರೀನಿವಾಸ್ ಪೂಜಾರಿ, ಲಕ್ಷ್ಮಣ್ ಕುಲಾಲ್, ಉಮೇಶ ಆಚಾರ್ಯ ಮತ್ತಿತರರು ಇದ್ದರು. ಡಾ.ದಿವ್ಯ ವಸಂತ್ ಶೆಟ್ಟಿ ಪ್ರಾರ್ಥಿಸಿದರು. ಮಾಜಿ ಪ್ರಾಂತೀಯ ಅಧ್ಯಕ್ಷ ದಾಮೋದರ ಬಿ.ಎಂ.ಪ್ರಾಸ್ತಾವಿಕ ಮಾತನಾಡಿದರು. ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ ಬಿ.ಸಿ.ರೋಡು ಸ್ವಾಗತಿಸಿ, ವಂದಿಸಿದರು. ಮಾಜಿ ಅಧ್ಯಕ್ಷ ಮಧ್ವರಾಜ್ ಬಿ.ಕಲ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸುನಿಲ್ ಬಿ. ವಂದಿಸಿದರು.
Be the first to comment on "ಲಯನ್ಸ್ ಕ್ಲಬ್ ಪ್ರಾಂತೀಯ ಸಮ್ಮೇಳನ ಮನವಿ ಪತ್ರ ಬಿಡುಗಡೆ"