ಬಂಟ್ವಾಳ ತಾಲೂಕಿನ ಒಟ್ಗಟು 396 ಬ್ಯಾಲೆಟ್ ಬಾಕ್ಸ್ ಗಳನ್ನೀಗ ಶುಚಿಗೊಳಿಸಿ, ಹೊಳಪು ನೀಡುವ ಕಾರ್ಯ ನಡೆಯುತ್ತಿದೆ. ಕಾರಣ ಮುಂಬರುವ ಗ್ರಾಪಂ ಚುನಾವಣೆ. ಈಗಾಗಲೇ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ 396 ಬ್ಯಾಲೆಟ್ ಬಾಕ್ಸ್ ಗಳನ್ನು ಸಿದ್ಧಗೊಳಿಸಲಾಗುತ್ತಿವೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆ ನಿರ್ವಹಣೆಯೂ ದೊಡ್ಡ ಸವಾಲು. ಬೂತ್ ಒಂದಕ್ಕೆ ಮತದಾರರ ಸಂಖ್ಯೆ 1 ಸಾವಿರಕ್ಕೆ ಸೀಮಿತಗೊಳಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಆರೋಗ್ಯ ನೋಡಲ್ ಅಕಾರಿಯನ್ನು ನೇಮಿಸಲಾಗುತ್ತದೆ. ಮತದಾರರಿಗೆ ಮೊದಲು ಥರ್ಮಲ್ ಸ್ಕ್ಯಾನಿಂಗ್ ಮಾಡಿ, ನಿಗದಿತ ತಾಪಮಾನಕ್ಕಿಂತ ಹೆಚ್ಚಿದ್ದಲ್ಲಿ ಆ ಮತದಾರರನ್ನು ಎರಡುಬಾರಿ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು, ಅಗಲೂ ಮೊದಲ ತಾಪಮಾನವಿದ್ದರೆ ಅಂತಹ ಮತದಾರನಿಗೆ ಟೋಕನ್ ನೀಡಿ ಮತದಾನದ ಅಂತ್ಯದ ವೇಳೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆಗ ಕೋವಿಡ್ ಸಂಬಂಸಿದ ಸುರಕ್ಷತಾಕ್ರಮವನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಹಾಗೆಯೇ 80 ವರ್ಷ ಮೇಲ್ಪಟ್ಟವರು, ಕೋವಿಡ್ ಸೋಂಕು ಶಂಕಿತ, ಹೋಂ,ಇನ್ಸ್ಟಿಟ್ಯೂಷನ್ ನಲ್ಲಿರುವ ಮತದಾರರಿಗೆ ಅಂಚೆ ಮೂಲಕ ಮತದಾನದ ಅವಕಾಶ ಇರುತ್ತದೆ. ಬಂಟ್ವಾಳ ತಾಲೂಕಿನಲ್ಲಿ ಒಟ್ಟು 58 ಗ್ರಾಪಂಗಳಿದ್ದು,ಈ ಪೈಕಿ ಪುದು ಗ್ರಾಪಂ ಹೊರತು ಪಡಿಸಿ 57 ಗ್ರಾಪಂ ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಪುದು ಪಂಚಾಯತ್ ನ ಚುನಾಯಿತ ಪ್ರತಿನಿಗಳ ಅವ ಇನ್ನು ಕೂಡ ಮುಗಿಯದಿರುವ ಹಿನ್ನಲೆಯಲ್ಲಿ ಚುನಾವಣೆ ನಡೆಯುತ್ತಿಲ್ಲ. ಬಂಟ್ವಾಳ ತಾಲೂಕಾಡಳಿತದ ಚುನಾವಣಾ ಶಾಖಾ ವಿಭಾಗ ಈ ನಿಟ್ಟಿನಲ್ಲಿ ತಯಾರಿಯಲ್ಲಿ ನಿರತವಾಗಿದೆ.
ಪ್ರಸ್ತುತ 3,32,662 ಮತದಾರರು ಇದ್ದು, ಇವರಲ್ಲಿ 1,64,279 ಪುರುಷರು, 1,68,377 ಮಹಿಳೆಯರು ಹಾಗೂ 5 ಇತರರು ಇದ್ದಾರೆ. ಚುನಾವಣಾ ದಿನಾಂಕ ಪ್ರಕಟವಾಗುವ ವರೆಗೂ ಹೊಸ ಮತದಾರರ ಸೇರ್ಪಡೆಗೆ ಅವಕಾಶವಿದೆ. 306 ಬೂತ್ ಜೊತೆಗೆ 90 ಆಕ್ಸಿಲರಿ ಬೂತ್ ಗಳು ಸೇರಿ ಒಟ್ಟು 396 ಮತಗಟ್ಟೆಗಳು ಇರಲಿವೆ. ತಾಲೂಕು ಚುನಾವಣಾ ಶಾಖೆ ಈಗಾಗಲೇ ತಯಾರಿಗಳನ್ನು ಮಾಡಿಕೊಂಡಿದೆ. 57 ಚುನಾವಣಾಕಾರಿಗಳು ಮತ್ತು 61 ಸಹಾಯಕ ಚುನಾವಣಾಕಾರಿಗಳು ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಕೋವಿಡ್ ನ ಎಲ್ಲ ನಿಯಮಗಳನ್ನು ಪಾಲಿಸಿ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ ಎನ್ನುತ್ತಾರೆ ಚುನಾವಣಾ ಶಾಖೆ ಉಪತಹಸೀಲ್ದಾರ್ ರಾಜೇಶ್ ನಾಯ್ಕ್.
Be the first to comment on "ಕೋವಿಡ್ ನಡುವೆಯೂ ಗ್ರಾಪಂ ಮತದಾನ ಬಿಸಿ: ಚುನಾವಣಾ ಶಾಖೆಯಲ್ಲಿ ಸಿದ್ಧತಾ ಕಾರ್ಯ"