ಬಂಟ್ವಾಳ: ಮಾಣಿ ಗ್ರಾಮಕ್ಕೆ ಶಾಸಕನಾಗಿ 2 ವರ್ಷಗಳಲ್ಲಿ 2 ಕೋಟಿ ರೂ ಅನುದಾನ ಒದಗಿಸಲಾಗಿದ್ದು, ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಣಿ ಮಹಾಶಕ್ತಿ ಕೇಂದ್ರದ ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಕುಟುಂಬ ಮಿಲನ ಕಾರ್ಯಕ್ರಮ ಬದಿಗುಡ್ಡೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ಪಂಚಾಯತ್ ಗೆ ಕೇಂದ್ರದ ಮೋದಿ ಸರಕಾರ 14 ಮತ್ತು 15 ಹಣಕಾಸು ಯೋಜನೆಯಡಿ ನೇರ ಅನುದಾನ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಮಹತ್ತರವಾದ ಕೊಡುಗೆ ನೀಡಿದ್ದಾರೆ.ಮಾಣಿ ಗ್ರಾಮಕ್ಕೆ ಶಾಸಕನಾಗಿ 2 ವರ್ಷದಲ್ಲಿ 2 ಕೋಟಿ ಅನುದಾನ ಒದಗಿಸಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಿತ್ತಿದ್ದು. ಗ್ರಾಮದಲ್ಲಿ ಕೇಂದ್ರ ಸರಕಾರದ ಕೃಷಿ ಸಮ್ಮಾನ್ ಯೋಜನೆಯಡಿ 416 ಫಲಾನುಭವಿಗಳಿದ್ದು ವಾರ್ಷಿಕವಾಗಿ ತಲಾ 10000ದಂತೆ ಸಹಾಯಧನ ಪಡೆಯುತ್ತಿದ್ದಾರೆ.ಇತ್ತೀಚೆಗೆ ನಡೆದ ಆಯುಷ್ಮಾನ್ ಕಾರ್ಡ್ ಅಭಿಯಾನದಲ್ಲಿ 1200 ಜನರಿಗೆ ಉಚಿತ ಕಾರ್ಡ್ ನ್ನು ಮಾಣಿ ಬಿಜೆಪಿ ಮಾಡಿದ್ದು ಪ್ರಶಂಸನೀಯವಾಗಿದ್ದು, ಮುಂದಿನ ಪಂಚಾಯತ್ ಚುನಾವಣೆಯಲ್ಲಿ ಮಾಣಿಯಲ್ಲಿ ಮತ್ತೊಮ್ಮೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ರಾಜಕಾರಣವನ್ನು ಜನತೆ ಬೆಂಬಲಿಸುವಂತೆ ಕರೆ ನೀಡಿದರು.
ಈ ಸಂದರ್ಭ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ರಾದ ಹರಿಕೃಷ್ಣ ಬಂಟ್ವಾಳ್, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯ ನಿರ್ದೇಶಕಿ ಸುಲೋಚನ ಜಿ.ಕೆ ಭಟ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ವಿಟ್ಲಪಡ್ನೂರು, ಡೊಂಬಯ ಅರಳ ಪ್ರಮುಖರಾದ ಗಣೇಶ್ ರೈ ಮಾಣಿ, ಪುಷ್ಪರಾಜ್ ಚೌಟ,ನಾರಾಯಣ ಶೆಟ್ಟಿ, ಹರೀಶ್ ಕುಲಾಲ್, ನಾರಾಯಣ ಭಟ್, ಮಹಾಬಲ ಚೌಟ ಮತ್ತು ಪ್ರಮುಖ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
Be the first to comment on "ಮಾಣಿ ಗ್ರಾಮಕ್ಕೆ 2 ವರ್ಷಗಳಲ್ಲಿ 2 ಕೋಟಿ ರೂ ಅನುದಾನ: ರಾಜೇಶ್ ನಾಯ್ಕ್"