ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ತಾಲೂಕಿನ ಅರಳ ಗ್ರಾ.ಪಂ ವ್ಯಾಪ್ತಿಯಲ್ಲಿ ರೂ 2 ಕೋಟಿ 70 ಲಕ್ಷ ಅನುದಾನದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು.
ಅಲ್ಮುಡೆ ರಸ್ತೆ 20 ಲಕ್ಷ ,ಗರುಡ ಮಹಾಕಾಳಿ ದೇವಸ್ಥಾನದ ರಥಬೀದಿ 25ಲಕ್ಷ, ಕಲ್ಲೊಟ್ಟೆ ಸೇತುವೆ 25ಲಕ್ಷ, ಹಿಂದೂ ರುದ್ರ ಭೂಮಿ 4 ಲಕ್ಷ , ಪಾಚಿಲೋಡಿ ರಸ್ತೆ 15 ಲಕ್ಷ, ಅರಳ ಕುಟ್ಟಿಕಳ ರಸ್ತೆ 5 ಲಕ್ಷ , ಬೊಳ್ಳಾಲು ಗುಡ್ಡೆ ರಸ್ತೆ 10ಲಕ್ಷ, ಇರ್ನಿ ಕುದ್ರು ಕಿಂಡಿ ಅಣೆಕಟ್ಟು 40ಲಕ್ಷ ಕಾಮಗಾರಿಗಳಿಗೆ ಚಾಲನೆ ಮತ್ತು ಪೂರ್ಣಗೊಂಡ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಬಂಟ್ವಾಳಕ್ಕೆ ಸರಕಾರದ ವಿವಿಧ ಇಲಾಖೆಗಳಿಂದ ಗರಿಷ್ಠ ಅನುದಾನ ಬಂಟ್ವಾಳ ಕ್ಷೇತ್ರಕ್ಕೆ ಸಿಕ್ಕಿದ್ದು ವಿಶೇಷ ಮುತುವರ್ಜಿಯಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ತುಂಗಪ್ಪ ಬಂಗೇರಾ, ಪಂಚಾಯತ್ ಮಾಜಿ ಅಧ್ಯಕ್ಷರಾದ ತುಂಗಮ್ಮ, ಪ್ರಮುಖರಾದ ಜಗದೀಶ ಆಳ್ವ,ರಂಜಿನಿ,ಲಕ್ಷ್ಮಿಧರ ಪೂಜಾರಿ, ಲಕ್ಷ್ಮಿಧರ ಶೆಟ್ಟಿ, ರಂಜನ್, ಡೊಂಬಯ ಅರಳ, ಉಮೇಶ್ ಅರಳ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ಪ್ರಸನ್ನ ಶೆಟ್ಟಿ, ಬಾಬು ಶೇಕ, ಯೋಗೀಶ್ ಅರಳ, ಅಶ್ವಥ್ ಅರಳ, ಶಶಿಧರ ಶೆಟ್ಟಿ, ರಾಜೇಂದ್ರ ಕರ್ಪೆ ಉಪಸ್ಥಿತರಿದ್ದರು.
Be the first to comment on "ಅರಳ ಗ್ರಾಪಂನಲ್ಲಿ 2.7 ಕೋಟಿ ರೂ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ"