ವಿಟ್ಲ

ಸಮಸ್ತ ಹನೀಫಿ ಉಲಮಾ ಒಕ್ಕೂಟದಿಂದ ಮದ್ರಸ ಅಧ್ಯಾಪಕರಿಗೆ ಆಹಾರದ ಕಿಟ್ ವಿತರಣೆ

ಜಾಹೀರಾತು

ವಿಟ್ಲ: ಇಂದಿನ ಸಂದಿಗ್ಧ ಘಟ್ಟದಲ್ಲಿ ಕೆಲಸ ಮತ್ತು ವೇತನ ವಿಲ್ಲದೆ ಸಂಕಷ್ಟದಲ್ಲಿರುವ ಸುಮಾರು ಐವತ್ತಕ್ಕೂ ಮಿಕ್ಕಿದ ಮದ್ರಸ ಅಧ್ಯಾಪಕರಿಗೆ ಕರ್ನಾಟಕ ರಾಜ್ಯ ‘ಸಮಸ್ತ’ ಹನೀಫಿ ಉಲಮಾ ಒಕ್ಕೂಟದ ವತಿಯಿಂದ ದಿನ ಬಳಕೆಯ ದಿನಸಿ ಸಾಮಾನುಗಳ ಕಿಟ್ ಗಳನ್ನು ಹಾಗೂ ಎರಡು ಹೆಣ್ಮಕ್ಕಳ ವಿವಾಹ ಕಾರ್ಯಕ್ಕೆ ಧನಸಹಾಯವನ್ನು ಇಂದು ವಿಟ್ಲ ದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು.

‘ಸಮಸ್ತ’ ಕೇಂದ್ರ ಮುಶಾವರ ಸದಸ್ಯ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಕಾರ್ಯಕ್ರಮವನ್ನು ಉದ್ಗಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ  ಮೌಲನಾ ಉಲಮಾ ಉಮರಾ ಸಾದಾತ್ ಮಜ್ಲಿಸ್ ಅಧ್ಯಕ್ಷ ಕಬಕ ಮೌಲನಾ ಅಬ್ದುರ್ರಝಾಕ್ ಉಸ್ತಾದ್ ಮಲೇಷ್ಯಾ ವಹಿಸಿದ್ದರು. ಎಸ್ಕೆಎಸ್ಸಸ್ಸೆಫ್ ರಾಜ್ಯಾಧ್ಯಕ್ಷ.ಅನೀಸ್ ಕೌಸರಿ, ದ.ಕ.ಜಿಲ್ಲಾ ಎಸ್ಕೆಎಸ್ಸಸ್ಸೆಫ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಹನೀಫಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಹನೀಫಿ ಮರ್ದಾಳ ಮೊದಲಾದವರು  ಮಾತನಾಡಿದರು.

‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ವಿಟ್ಲ ರೇಂಜ್ ಮದ್ರಸ ಮ್ಯಾನೆಜ್‌ಮೆಂಟ್‌ ಅಧ್ಯಕ್ಷ ಶರೀಫ್ ಮೂಸ ಕುದ್ದುಪದವು, ಪುತ್ತೂರು ಎಸ್ಕೆಎಸ್ಸಸ್ಸೆಫ್ ವಿಖಾಯ ಪ್ರಮುಖ ಸಿದ್ದೀಕ್ ಸುಲ್ತಾನ್, ಇಬ್ರಾಹಿಂ ಹನೀಫಿ ಬುಡೋಳಿ, ಅಬ್ದುರ್ರಝಾಕ್ ಹನೀಫಿ ಕಕ್ಕಿಂಜೆ , ಉಬೈದ್ ವಿಟ್ಲ ಬಜಾರ್, ಶರೀಫ್ ಕೆಲಿಂಜ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಾವೂದ್ ಹನೀಫಿ ಕೃಷ್ಣಾಪುರ ಮತ್ತು ಅಬ್ದುಲ್ ಗಫೂರ್ ಹನೀಫಿ ವಿಟ್ಲ ಅವರು ಪ್ರವಾದಿ ಮದ್ಹ್ ಗೀತೆ ಹಾಡಿದರು. ಸಮಿತಿಯ ಅಧ್ಯಕ್ಷ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಸ್ವಾಗತಿಸಿ ಸಂಘಟನೆಯ ಯೋಜನೆಯ ಬಗ್ಗೆ ವಿವರಿಸಿದರು, ಇಸ್ಮಾಯಿಲ್ ಹನೀಫಿ ವಿಟ್ಲ ವಂದಿಸಿದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.