ತಾಪಂ ಮಾಜಿ ಸದಸ್ಯ, ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಏಫ್ರೆಮ್ ಸಿಕ್ವೇರಾ ನಿಧನ ಹೊಂದಿದ್ದು, ಜನಾನುರಾಗಿಯಾಗಿದ್ದ ಅವರ ನಿಧನ ಪಕ್ಷಕ್ಕೆ ಮತ್ತು ವೈಯಕ್ತಿಕವಾಗಿ ತುಂಬಲಾರದ ನಷ್ಟ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅಂತಿಮ ನಮನವನ್ನು ಸಲ್ಲಿಸಿದರು. ಜನಾನುರಾಗಿಯಾಗಹಿದ್ದು, ಆಪದ್ಭಾಂಧವರೆನಿಸಿಕೊಂಡಿದ್ದ ಅವರು, ಅಮ್ಟಾಡಿ ಗ್ರಾಪಂ ಮಾಜಿ ಸದಸ್ಯರಾಗಿ, ಲೊರೆಟ್ಟೊ ವಾಳೆಯ ಗುರಿಕಾರರಾಗಿ, ಕಥೋಲಿಕ್ ಸಭಾ ಲೊರೆಟ್ಟೊ ಘಟಕಾಧ್ಯಕ್ಷರಾಗಿ ಸ್ಪಂದಿಸುತ್ತಿದ್ದರು. 60 ವರ್ಷದ ಸಿಕ್ವೇರಾ, ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವಪುತ್ರಿಯನ್ನು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…